ಬುಮ್ರಾ ದಾಳಿಗೆ ಮಂಕಾದ ಗುಜರಾತ್: ಮುಂಬೈಗೆ 169 ರನ್ ಟಾರ್ಗೆಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಐಪಿಎಲ್ 2024ರ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ದಿಟ್ಟ ಬೌಲಿಂಗ್ ಪ್ರದರ್ಶನ ನೀಡಿ ಗುಜರಾತ್ ಟೈಟಾನ್ಸ್ ತಂಡವನ್ನು 168 ರನ್‌ಗೆ ಕಟ್ಟಿಹಾಕಿದೆ.

ನರೇಂದ್ರ ಮೋದಿ ಕ್ರೀಡಾಂಗದಲ್ಲಿ ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳ ಅಬ್ಬರಕ್ಕೆ ಗುಜರಾತ್ ಟೈಟಾನ್ಸ್ ಏಕಾಏಕಿ ಕುಸಿತ ಕಂಡಿತು. ಜಸ್ಪ್ರೀತ್ ಬುಮ್ರಾ ದಾಳಿ ಆರಂಭಗೊಳ್ಳುತ್ತಿದ್ದಂತೆ ಗುಜರಾತ್ ಟೈಟಾನ್ಸ್ ಮಂಕಾಯಿತು.

ಮೊದಲ ಎಸೆತದಲ್ಲಿ ಬೌಂಡರಿ ಸಿಡಿಸಿ ಅಬ್ಬರಿಸಿದ ವೃದ್ಧಿಮಾನ್ ಸಾಹ 19 ರನ್ ಸಿಡಿಸಿ ಔಟಾದರು. ನಾಯಕ ಶುಭಮನ್ ಗಿಲ್ 31 ರನ್ ಕಾಣಿಕೆ ನೀಡಿದರು. ಆದರೆ ಅಜ್ಮುತುಲ್ಹಾ ಒಮರ್ಝಾಯಿ ಕೇವಲ 17 ರನ್ ಸಿಡಿಸಿ ಔಟಾದರು. ಇತ್ತ ಡೇವಿಡ್ ಮಿಲ್ಲರ್ ಕೇವಲ 12 ರನ್ ಸಿಡಿಸಿ ನಿರ್ಗಮಿಸಿದರು. ಹೋರಾಟ ನೀಡಿದ ಸಾಯಿ ಸುದರ್ಶನ್ 45 ರನ್ ಸಿಡಿಸಿ ಔಟಾದರು.

ರಾಹುಲ್ ಟಿವಾಟಿಯಾ 22 ರನ್ ಸಿಡಿಸಿದರು. ರಶೀದ್ ಖಾನ್ ಅಜೇಯ 4 ಹಾಗೂ ವಿಜಯ್ ಶಂಕರ್ ಅಜೇಯ 6 ರನ್ ಸಿಡಿಸಿದರು. ಈ ಮೂಲಕ ಗುಜರಾತ್ ಟೈಟಾನ್ಸ್ 6 ವಿಕೆಟ್ ನಷ್ಟಕ್ಕೆ 168 ರನ್ ಸಿಡಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!