Wednesday, October 5, 2022

Latest Posts

ಕೋಲ್ಕತ್ತಾದ ಬಂದರಿನಲ್ಲಿ 200 ಕೋಟಿ ಮೌಲ್ಯದ ಹೆರಾಯಿನ್​ ಜಪ್ತಿ ಮಾಡಿದ ಗುಜರಾತ್ ಪೊಲೀಸರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗುಜರಾತ್ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯವು ಜಂಟಿ ಕಾರ್ಯಾಚರಣೆಯಿಂದ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಬಂದರಿನಲ್ಲಿ 40 ಕೆಜಿ ಹೆರಾಯಿನ್​ ಜಪ್ತಿ ಮಾಡಿದೆ.

ಈ 40 ಕೆಜಿ ಹೆರಾಯಿನ್ ಮಾರುಕಟ್ಟೆ ಮೌಲ್ಯವು ಅಂದಾಜು 200 ಕೋಟಿ ರೂ.ಗಳಾಗಿದೆ. ಸ್ಕ್ರ್ಯಾಪ್ ಕಂಟೈನರ್‌ನಲ್ಲಿ ಹೆರಾಯಿನ್​ ಕೋಲ್ಕತ್ತಾದ ಬಂದರಿಗೆ ತರಲಾಗಿತ್ತು. ಈ ಕಂಟೈನರ್‌ ಫೆಬ್ರವರಿಯಲ್ಲಿ ದುಬೈನಿಂದ ಬಂದಿತ್ತು ಎಂದು ತಿಳಿದು ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!