May 20, 2026
Wednesday, May 20, 2026
spot_img

ಸಿಎಸ್‌ಕೆ ಅಟ್ಟಹಾಸಕ್ಕೆ ಬ್ರೇಕ್ ಹಾಕಿದ ಗುಜರಾತ್: ಚೆನ್ನೈ ಕೋಟೆಯಲ್ಲಿ ಟೈಟನ್ಸ್ ವಿಜಯಭೇರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೆನ್ನೈಯ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 37ನೇ ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಭರ್ಜರಿ ಜಯ ದಾಖಲಿಸಿದೆ. ತವರಿನ ಅಂಗಳದಲ್ಲಿ ಪಾರುಪತ್ಯ ಮೆರೆಯುವ ಸಿಎಸ್‌ಕೆ ಲೆಕ್ಕಾಚಾರವನ್ನು ಗುಜರಾತ್ ತಂಡ ಸಂಪೂರ್ಣವಾಗಿ ತಲೆಕೆಳಗಾಗಿಸಿದೆ.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವಂತಾದ ಸಿಎಸ್‌ಕೆ ಆರಂಭದಿಂದಲೇ ಸಂಕಷ್ಟಕ್ಕೆ ಸಿಲುಕಿತು. ತವರಿನ ಅಭಿಮಾನಿಗಳ ಬೆಂಬಲವಿದ್ದರೂ ಸಹ, ಗುಜರಾತ್ ಬೌಲರ್‌ಗಳ ನಿಖರ ದಾಳಿಗೆ ಉತ್ತರಿಸಲಾಗದೆ ಬ್ಯಾಟರ್‌ಗಳು ಪರದಾಡಿದರು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ ಸಿಎಸ್‌ಕೆ ತಂಡವು ಕೇವಲ 158 ರನ್ ಗಳಿಸಲಷ್ಟೇ ಶಕ್ತವಾಯಿತು.

159 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ತಂಡವು ಅತ್ಯಂತ ಸಂಯಮದ ಆಟವಾಡಿತು. ಆರಂಭಿಕ ಆಟಗಾರರ ಜವಾಬ್ದಾರಿಯುತ ಪ್ರದರ್ಶನದಿಂದಾಗಿ ತಂಡವು ಕೇವಲ 2 ವಿಕೆಟ್ ಕಳೆದುಕೊಂಡು ಸುಲಭವಾಗಿ ಗೆಲುವಿನ ಗುರಿ ತಲುಪಿತು. ಈ ಮೂಲಕ ಸಿಎಸ್‌ಕೆ ತಂಡಕ್ಕೆ ತನ್ನದೇ ಮೈದಾನದಲ್ಲಿ ಸೋಲಿನ ರುಚಿ ತೋರಿಸಿತು.

ಈ ಭರ್ಜರಿ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿದಿದೆ. ಮತ್ತೊಂದೆಡೆ, ಸೋಲನುಭವಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 6ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಪ್ಲೇ-ಆಫ್ ದೃಷ್ಟಿಯಿಂದ ಈ ಪಂದ್ಯದ ಫಲಿತಾಂಶ ಉಭಯ ತಂಡಗಳಿಗೆ ಅತ್ಯಂತ ನಿರ್ಣಾಯಕವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !