ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಪಡೆದ ಗುಜರಾತ್‌: ಎಲ್ಲ ಜಿಲ್ಲೆಗಳಲ್ಲಿ ಶುರುವಾಯಿತು ಜಿಯೋ 5ಜಿ ಸೇವೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ದೇಶದಲ್ಲಿ 5ಜಿ ಸೇವೆ ವಿವಿಧ ನಗರಗಳಿಗೆ ಕಾಲಿಟ್ಟಿದ್ದು, ಇದರ ಭಾಗವಾಗಿ ರಿಲಯನ್ಸ್ ಜಿಯೋ ಇದೀಗ, ಗುಜರಾತ್‌ನ ಎಲ್ಲ 33 ಜಿಲ್ಲಾ ಕೇಂದ್ರಗಳಲ್ಲಿ 5ಜಿ ಸೇವೆಯನ್ನು ಕಲ್ಪಿಸಿದೆ.

ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿರುವ ಕಂಪನಿ, ಎಲ್ಲ ಜಿಲ್ಲೆಗಳಲ್ಲಿ ಜಿಯೋ ಸೇವೆಯನ್ನು ಪಡೆದ ದೇಶದ ಮೊದಲ ರಾಜ್ಯ ಎಂಬ ಖ್ಯಾತಿಗೆ ಗುಜರಾತ್ ಪಾತ್ರವಾಗಿದೆ ಎಂದು ಹೇಳಿದೆ.

ಟ್ರೂ-5G ವ್ಯಾಪ್ತಿಯನ್ನು ಗುಜರಾತ್‌ನ 33 ಜಿಲ್ಲಾ ಕೇಂದ್ರಗಳಲ್ಲಿ ವಿಸ್ತರಿಸುವ ಮೂಲಕ ದೊಡ್ಡ ಹೆಜ್ಜೆ ಇಟ್ಟಿದೆ. ಆ ಮೂಲಕ ಶೇ.100ರಷ್ಟು ಜಿಲ್ಲಾ ಕೇಂದ್ರಗಳಲ್ಲಿ 5G ಕವರೇಜ್ ಪಡೆಯುವ ಭಾರತದ ಮೊದಲ ರಾಜ್ಯ ಗುಜರಾತ್ ಆಗಿದೆ. ಅದ್ರಲ್ಲೂ ವಿಶೇಷ ಏನೆಂದರೆ ರಿಲಯನ್ಸ್‌ನ ಮೂಲ ಗುಜರಾತ್ ಆಗಿರುವುದರಿಂದ ವಿಶೇಷ ಸ್ಥಾನವನ್ನು ಹೊಂದಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!