Thursday, September 29, 2022

Latest Posts

ಆಸ್ಕರ್ ಅಂಗಳಕ್ಕೆಲಗ್ಗೆ ಇಟ್ಟ ಗುಜರಾತಿ ಚಿತ್ರ ‘ಚೆಲೋ ಶೋ’!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಆಸ್ಕರ್ 2023 ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾಕ್ಕೆ ಪಾನ್‌ ನಳಿನ್‌ ನಿರ್ದೇಶನದ ಗುಜರಾತಿ ಚಲನಚಿತ್ರ ‘ಚೆಲೋ ಶೋ’ ಭಾರತದ ಅಧಿಕೃತ ಪ್ರವೇಶ ಮಾಡಿದೆ .
ಗುಜರಾತಿ ಚಲನಚಿತ್ರ ‘ಚೆಲೋ ಶೋ’ 95 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಅಂತರಾಷ್ಟ್ರೀಯ ಚಲನಚಿತ್ರ ವಿಭಾಗಕ್ಕೆ ಭಾರತದಿಂದ ಆಯ್ಕೆಯಾಗಿದೆ.
ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಹಾಗೂ ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮಿರ್‌ ಫೈಲ್ಸ್‌ ಚಿತ್ರಗಳು ರೇಸ್‌ನಲ್ಲಿದ್ದರೂ ಚೆಲ್ಲೋ ಶೋ ಇವೆಲ್ಲವನ್ನೂ ಹಿಂದಿಕ್ಕಿ ಭಾರತದ ಅಧಿಕೃತ ಎಂಟ್ರಿಯಾಗಿ ಘೋಷಣೆಯಾಗಿದೆ.
ಚೆಲ್ಲೋ ಶೋ ಅಂದರೆ ಕೊನೆಯ ಚಿತ್ರದ ಶೋ ಎನ್ನುವ ಅರ್ಥವಾಗಿದ್ದು, 2021ರಲ್ಲಿ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಭಾವಿನ್‌ ರಾಬರಿ, ಭವೇಶರ್‌ ಶ್ರೀಮಾಲಿ, ರಿಚಾ ಮೀನಾ, ದೀಪನ್‌ ರಾವನ್‌ ಹಾಗೂ ಪರೇಶ್‌ ಮೆಹ್ತಾ ಮುಖ್ಯಪಾತ್ರದಲ್ಲಿ ನಟಿಸಿದ್ದರು.
2021ರ ಜೂನ್‌ 10 ರಂದದು 20ನೇ ಟ್ರಿಬೆಕ್ಕಾ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಈ ಚಿತ್ರ ಪ್ರೀಮಿಯರ್‌ ಆಗಿತ್ತು.
ಈ ಸುದ್ದಿಗೆ ಪಾನ್‌ ನಳಿನ್‌ ಕೂಡ ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ ಓಹ್‌ ಮೈ ಗಾಡ್‌. ಇದೆಂಥಾ ಸಂಭ್ರಮದ ರಾತ್ರಿ. ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾಕ್ಕೆ ಕೃತಜ್ಞತೆಗಳು ಮತ್ತು ಎಫ್‌ಎಫ್‌ಐ ತೀರ್ಪುಗಾರರ ಸದಸ್ಯರಿಗೆ ಧನ್ಯವಾದಗಳು.ಚೆಲ್ಲೋ ಶೋನಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು. ನನಗೆ ನಿಜಕ್ಕೂ ನಂಬಲಾಗುತ್ತಿಲ್ಲ. ಮನರಂಜನೆ, ಸ್ಫೂರ್ತಿ ಮತ್ತು ಜ್ಞಾನವನ್ನು ನೀಡುವ ಸಿನಿಮಾವನ್ನು ನಾನು ನಂಬುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಗುಜರಾತಿ ಭಾಷೆಯ ಕಮಿಂಗ್‌ ಏಜ್‌ ಡ್ರಾಮಾ ,ವಿಶ್ವದಾದ್ಯಂತ ವಿಮರ್ಶಕರು ಹಾಗೂ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅಕ್ಟೋಬರ್‌ 14 ರಿಂದ ಗುಜರಾತ್‌ನ ಥಿಯೇಟರ್‌ಗಳಲ್ಲಿ ಹಾಗೂ ದೇಶದ ಆಯ್ದ ಚಿತ್ರಮಂದಿರಗಳಲ್ಲಿ ಇದು ಮತ್ತೆ ಬಿಡುಡೆಯಾಗಲಿದೆ. ಗ್ರಾಮೀಣ ಗುಜರಾತ್‌ನಲ್ಲಿ ಬಾಲ್ಯದಲ್ಲಿ ಚಲನಚಿತ್ರಗಳ ಪ್ರೇಮದಲ್ಲಿ ಬೀಳುವ ನಿರ್ದೇಶಕ ಪಾನ್ ನಳಿನ್ ಅವರ ಸ್ವಂತ ನೆನಪುಗಳಿಂದ ಸ್ಫೂರ್ತಿ ಪಡೆದ ಚೆಲ್ಲೋ ಶೋ, ಡಿಜಿಟಲ್ ಕ್ರಾಂತಿಯ ಮಾಂತ್ರಿಕತೆಗೆ ಸಿಕ್ಕಿಬಿದ್ದ ಒಂಬತ್ತು ವರ್ಷದ ಹುಡುಗನನ್ನು ಕಥೆಯನ್ನು ಹೇಳುತ್ತದೆ. ಸೆಲ್ಯುಲಾಯ್ಡ್ ಫಿಲ್ಮ್ ಪ್ರೊಜೆಕ್ಷನ್ ಹಿಂದೆ ಇರುವ ಬೆಳಕು ಮತ್ತು ನೆರಳಿನ ವಿಜ್ಞಾನದ ಬಗ್ಗೆಯೂ ಚಿತ್ರ ಮಾತನಾಡುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!