ಗಾಜಾಕ್ಕೆ $100 ಮಿಲಿಯನ್ ಡಾಲರ್‌ ತುರ್ತು ನೆರವು ಘೋಷಿಸಿದ ಗಲ್ಫ್ ಕೌನ್ಸಿಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಸ್ರೇಲ್ ಸೈನಿಕರ ದಾಳಿಯಿಂದ ಹಾನಿಗೀಡಾದ ಗಾಜಾಕ್ಕೆ ಗಲ್ಫ್ ರಾಷ್ಟ್ರಗಳು 100 ಮಿಲಿಯನ್ ಡಾಲರ್ ತುರ್ತು ನೆರವು ಘೋಷಿಸಿವೆ. ಮಂಗಳವಾರ ಮಸ್ಕತ್‌ನಲ್ಲಿ ನಡೆದ ಗಲ್ಫ್ ಸಹಕಾರ ಮಂಡಳಿಯ ಸಭೆಯಲ್ಲಿ ಗಾಜಾ ಪಟ್ಟಿಗೆ $100 ಮಿಲಿಯನ್ ತುರ್ತು ಸಹಾಯವನ್ನು ಘೋಷಿಸಲಾಯಿತು. ಗಾಜಾ ಆಸ್ಪತ್ರೆ ಮೇಲೆ ನಡೆದ ದಾಳಿ ಬಳಿಕ ಈ ಬೆಳವಣಿಗೆಯಾಗಿದೆ.

ಬಹ್ರೇನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದ ಆರು ಗಲ್ಫ್ ಸಹಕಾರ ಮಂಡಳಿ ದೇಶಗಳ ಉನ್ನತ ರಾಜತಾಂತ್ರಿಕರು ಮಸ್ಕತ್‌ನಲ್ಲಿ ಭೇಟಿಯಾಗಿ ಸಭೆ ನಡೆಸಿ, ತುರ್ತು ಸಹಾಯದ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

ಇಸ್ರೇಲ್ ನಿಯಂತ್ರಣದಲ್ಲಿಲ್ಲದ ರಫಾ ಗಡಿ ಮೂಲಕ ಸಹಾಯವನ್ನು ಕಳುಹಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಮೂಲಭೂತ ಸೌಕರ್ಯಗಳನ್ನೊತ್ತ ನೂರಾರು ಟ್ರಕ್‌ಗಳು ಎಲ್ ಅರಿಶ್‌ನಿಂದ ರಫಾಹ್‌ವರೆಗಿನ 40 ಕಿಲೋಮೀಟರ್ ರಸ್ತೆ ಮೂಲಕ ಗಾಜಾ ತಲುಪಲಿವೆ. ಗಾಜಾದಲ್ಲಿ ನಾಗರಿಕರ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಗಲ್ಫ್ ಸಹಕಾರ ಮಂಡಳಿಯ ಪ್ರಧಾನ ಕಾರ್ಯದರ್ಶಿ ಜಾಸಿಮ್ ಮೊಹಮ್ಮದ್ ಒತ್ತಾಯಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!