Sunday, December 3, 2023

Latest Posts

ಮಕ್ಕಳೊಂದಿಗೆ ಗಲ್ಲಿ ಕ್ರಿಕೆಟ್‌, ದೆಹಲಿಯ ಬೀದಿಯಲ್ಲಿ ರಾಮ್‌ ಲಡು ಸವಿದು ಖುಷಿಪಟ್ಟ ಆಸ್ಟ್ರೇಲಿಯಾ ಉಪ ಪ್ರಧಾನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಆಸ್ಟ್ರೇಲಿಯಾದ ಉಪ ಪ್ರಧಾನಿ ಹಾಗೂ ರಕ್ಷಣಾ ಸಚಿವ ರಿಚರ್ಡ್‌ ಮಾರ್ಲಸ್‌ ಭಾರತ ಪ್ರವಾಸದಲ್ಲಿದ್ದು, ಈ ವೇಳೆ ತಮ್ಮ ಅಮೂಲ್ಯ ಸಮಯವನ್ನು ಸ್ಮರಣೀಯವಾಗಿಸಿದ್ದಾರೆ.

ದೆಹಲಿಯ ಬೀದಿಗಳಲ್ಲಿ ಸಂಚರಿಸಿದ ಅವರು ರಾಮ್‌ ಲಡು ಹಾಗೂ ಲಿಂಬೆ ರಸ ಸವಿದ ಅವರು ಯುಪಿಐ ಮೂಲಕ ಪಾವತಿಸಿದ್ದನ್ನು ಬೆರಗಿನಿಂದ ನೋಡಿದ್ದಾರೆ.

ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಣೆ ನಂತರ, ದೆಹಲಿಗೆ ಪ್ರಯಾಣಿಸಿದ ರಿಚರ್ಡ್‌, ದೆಹಲಿಯ ಬೀದಿ ಬದಿ ಆಹಾರಗಳನ್ನು ಸವಿಯಲು ಮುಂದಾದರು. ನಂತರ ಅರುಣ್ ಜೇಟ್ಲಿ ಮೈದಾನದಲ್ಲಿ ಮಕ್ಕಳೊಂದಿಗೆ ಗಲ್ಲಿ ಕ್ರಿಕೆಟ್‌ ಆಡಿ ಸಂಭ್ರಮಿಸಿದರು.

ದೆಹಲಿಯ ಪ್ರತಿಷ್ಠಿತ ಸ್ಟ್ರೀಟ್ ಫುಡ್‌ ಬೀದಿಗೆ ತೆರಳಿದ ರಿಚರ್ಡ್‌, ಅಲ್ಲಿ ಸಿಗುವ ತರಹೇವಾರಿ ತಿನಿಸುಗಳ ಬಗ್ಗೆ ಮಾಹಿತಿ ಪಡೆದರು. ಅಂತಿಮವಾಗಿ ರಾಮ್‌ ಲಡ್ಡು ತಿನ್ನುವ ಇಂಗಿತ ವ್ಯಕ್ತಪಡಿಸಿದರು. ಪುಟ್ಟ ದೊನ್ನೆಯಲ್ಲಿ ಕೊಡುವ ರಾಮ್‌ ಲಾಡುವನ್ನು ವಿಶೇಷವಾಗಿ ಸವಿದರು. ಲಿಂಬು ರಸ ಕುಡಿದ ಅವರು ನಂತರ ಯುಪಿಐ ಮೂಲಕ ಸರಳ ಪಾವತಿಯನ್ನು ವೀಕ್ಷಿಸಿದರು.

ಇವರೊಂದಿಗೆ ವಿದೇಶಾಂಗ ಸಚಿವ ಪೆನ್ನಿ ವಾಂಗ್‌ ಇದ್ದರು.

https://twitter.com/ANI/status/1726537756975980974

ಇದಕ್ಕಾಗಿ ಅವರು ಪಾವತಿ ಕುರಿತು ಪ್ರಶ್ನಿಸಿದಾಗ, ಪಕ್ಕದಲ್ಲಿದ್ದ ನೌಕಾ ಸೇನಾ ಅಧಿಕಾರಿಯೊಬ್ಬರು ತಮ್ಮ ಮೊಬೈಲ್‌ ಹಿಡಿದು ಸ್ಕ್ಯಾನ್ ಮಾಡುವ ಮೂಲಕ ಸರಳವಾಗಿ ಪಾವತಿಸುವ ವಿಧಾನವನ್ನು ತೋರಿಸಿದರು. ಅಷ್ಟೂ ಪ್ರಕ್ರಿಯೆಯನ್ನು ರಿಚರ್ಡ್‌ ಬೆರಗಿನಿಂದ ವೀಕ್ಷಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!