ಭಾರತ- ಪಾಕ್ ಗಡಿಯಲ್ಲಿ ಡ್ರೋನ್‌ ವಶಕ್ಕೆ ಪಡೆದ ಭದ್ರತಾ ಪಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಪಾಕಿಸ್ತಾನ ಗಡಿ ಭಾಗವಾಗಿರುವ ಪಂಜಾಬ್‌ನ ತರಣ್ ತಾರಣ್ ಜಿಲ್ಲೆಯಲ್ಲಿ ಗಡಿ ಭದ್ರತಾ ಪಡೆಯ ಸೈನಿಕರು ಸೋಮವಾರ ಡ್ರೋನ್‌ವೊಂದನ್ನು ವಶಕ್ಕೆ ಪಡೆದಿದ್ದಾರೆ.

ಕಳೆದ ಒಂದು ವಾರದಲ್ಲಿ ಪಂಜಾಬ್‌ನ ವಿವಿಧೆಡೆಗಳಲ್ಲಿ ಬಿಎಸ್‌ಎಫ್‌ ಸಿಬ್ಬಂದಿ ವಶಪಡಿಸಿಕೊಂಡ ಎಂಟನೇ ಡ್ರೋನ್‌ ಇದಾಗಿದೆ.

ಗಡಿಯಲ್ಲಿ ಹೆರಾಯಿನ್‌ ಕಳ್ಳಸಾಗಣೆ ಮಾಡಲು ಪಾಕಿಸ್ತಾನವು ಡ್ರೋನ್‌ ಬಳಸುತ್ತಿದೆ.ಖಚಿತ ಮಾಹಿತಿ ಆಧರಿಸಿ ಬಿಎಸ್‌ಎಫ್‌ ಮತ್ತು ಪೊಲೀಸರು ತರಣ್‌ ತಾರಣ್‌ ಜಿಲ್ಲೆಯ ಮೆಹ್ದಿಪುರ ಗ್ರಾಮದಲ್ಲಿ ಸೋಮವಾರ ಜಂಟಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಚೀನಾ ನಿರ್ಮಿತ ಕ್ವಾಡ್‌ಕಾಪ್ಟರ್‌ (ಡ್ರೋನ್‌) ಅನ್ನು ಜಮೀನಿನಲ್ಲಿ ಪತ್ತೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!