ಶಾಲೆಯ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ, 10 ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸ್ವೀಡನ್​ನ ಶಾಲೆಯೊಂದರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, 10 ಮಂದಿ ಸಾಔನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ. ದಾಳಿ ನಡೆಸಿದವರು ಯಾರೆಂಬುದು ಇನ್ನೂ ತಿಳಿದುಬಂದಿಲ್ಲ.

ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸುದ್ದಿ ಸಂಸ್ಥೆ ರಾಯ್ಟರ್ಸ್​ ಪ್ರಕಾರ, ಕೇಂದ್ರ ಒರೆಬ್ರೊ ನಗರದ ಶಾಲೆಯ ಮೇಲೆ ದಾಳಿ ನಡೆಸಿದೆ. ದಾಳಿಕೋರ ಮನಬಂದಂತೆ ಗುಂಡು ಹಾರಿಸಿದ್ದಾನೆ. ಸ್ವೀಡನ್​ನಲ್ಲಿ ಈ ನಗರವನ್ನು ಸುರಕ್ಷಿತ ನಗರವೆಂದೇ ಪರಿಗಣಿಸಲಾಗಿತ್ತು. ಗುಂಡಿನ ದಾಳಿಯಿಂದ ಜನರು ಆಘಾತಕ್ಕೊಳಗಾಗಿದ್ದಾರೆ.

ಗುಂಡಿನ ದಾಳಿಯ ನಂತರ ಶಾಲೆಯಲ್ಲಿ ಭದ್ರತೆ ಖಚಿತಪಡಿಸಿಕೊಳ್ಳಲು ಪೊಲೀಸರು ಇತರೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಸ್ಥಳೀಯರು ಹತ್ತಿರ ಹೋಗದಂತೆ ಮನವಿ ಮಾಡಲಾಗಿದೆ. ಅಲ್ಲದೆ ತನಿಖೆ, ಭದ್ರತೆಗೆ ಸಂಬಂಧಿಸಿದ ಕೆಲಸದಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ಕೂಡ ಹೇಳಿದ್ದಾರೆ.

ಶಸ್ತ್ರಸಜ್ಜಿತ ವ್ಯಕ್ತಿ ಒಬ್ಬರೇ ಈ ಕೆಲಸವನ್ನು ಮಾಡಿದ್ದಾರೆ ಎನ್ನಲಾಗುತ್ತಿದೆ. ಇದರಲ್ಲಿ ಭಯೋತ್ಪಾದಕರ ಕೈವಾಡವಿದ್ದಂತೆ ತೋರುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ರಾಜಧಾನಿ ಸ್ಟಾಕ್‌ಹೋಮ್‌ನಿಂದ ಪಶ್ಚಿಮಕ್ಕೆ 200 ಕಿಮೀ ದೂರದಲ್ಲಿರುವ ಶಾಲೆಯಲ್ಲಿ ಈ ಘಟನೆ ನಡೆದಿದೆ. ಸ್ವೀಡಷ್ ಇತಿಹಾಸದಲ್ಲಿ ನಡೆದ ಅತ್ಯಂತ ಕೆಟ್ಟ ಸಾಮೂಹಿಕ ಗುಂಡಿನ ದಾಳಿ ಎಂದು ಪ್ರಧಾನಿ ಉಲ್ಫ್​ ಕ್ರಿಸ್ಟಿರ್ಸನ್ ಹೇಳಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!