Wednesday, March 29, 2023

Latest Posts

ಮತ್ತೊಂದು ಹಿಟ್ ಅಂಡ್ ಡ್ರ್ಯಾಗ್ ವಿಡಿಯೋ: ಡಿಕ್ಕಿ ಹೊಡೆದು ಯುವಕರನ್ನು 4ಕಿ.ಮೀ.ಎಳೆದೊಯ್ದ ಕಾರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಹಿಟ್ ಅಂಡ್ ಡ್ರ್ಯಾಗ್ ಘಟನೆ ಪ್ರಕರಣಗಳು ಮಿತಿಮೀರಿವೆ. ಒಂದು ಘಟನೆ ತಣ್ಣಗಾಗುವ ಮೊದಲೇ ಹೊಸ ಹೊಸ ಕೇಸ್‌ಗಳು ಬೆಳಕಿಗೆ ಬರುತ್ತಿವೆ. ಮೋಟಾರ್‌ ಸೈಕಲ್‌ಗೆ ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಸುಮಾರು ನಾಲ್ಕು ಕಿಲೋಮೀಟರ್ ಯುವಕರನ್ನು ಎಳೆದೊಯ್ದಿರುವ ಘಟನೆ ಹರಿಯಾಣದ ಗುರುಗ್ರಾಮ್‌ನಲ್ಲಿ ಬುಧವಾರ ರಾತ್ರಿ ನಡೆದಿದೆ.

ಪೊಲೀಸರ ಪ್ರಕಾರ, ಗುರುಗ್ರಾಮ್‌ನ ಸೆಕ್ಟರ್ 62 ಪ್ರದೇಶದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಯುವಕರು ಕೆಲಸದಿಂದ ಮನೆಗೆ ಹೋಗುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಕಾರು ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಬೈಕ್‌ನಿಂದ ಬಿದ್ದು, ವಾಹನದ ಮುಂಭಾಗದ ಗ್ರಿಲ್‌ಗೆ ಸಿಕ್ಕಿಹಾಕಿಕೊಂಡಿದ್ದರಿಂದ ವಾಹನ ಸವಾರರು ಸುಮಾರು 4 ಕಿ.ಮೀ.ವರೆಗೆ ಎಳೆದೊಯ್ದಿದ್ದಾರೆ ಎಂದು ಯುವಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ವಾಹನ ಚಲಾಯಿಸುತ್ತಿದ್ದ ವ್ಯಕ್ತಿ ಕುಡಿದ ಅಮಲಿನಲ್ಲಿದ್ದು, ನಾಲ್ಕು ಚಕ್ರದ ವಾಹನದ ಕೆಳಗೆ ಬೈಕ್ ಸಿಕ್ಕಿಹಾಕಿಕೊಂಡರೂ ನಿಲ್ಲಿಸಲಿಲ್ಲ ಎಂದು ಆರೋಪಿಸಿದರು. ಕಿರುಚಾಡಿದರೂ ವಾಹನ ಚಾಲಕ ಕಿವಿಗೊಡದೆ ವಾಹನ ಚಲಾಯಿಸುತ್ತಲೇ ಹೋಗಿದ್ದಾನೆ. ಅದೃಷ್ಟವಶಾತ್‌ ಪ್ರಾಣಹಾನಿಯಾಗದೆ, ಗಾಯಗಳಿಂದ ಯುವಕರು ಪಾರಾಗಿದ್ದಾರೆ.

ಈ ದುಷ್ಕೃತ್ಯವನ್ನು ಹಿಂಬದಿ ಸವಾರರೊಬ್ಬರು ವಿಡಿಯೋ ತೆಗೆದಿದ್ದು, ವೈರಲ್‌ ಆಗಿದೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!