Wednesday, March 29, 2023

Latest Posts

ನಿರ್ಮಾಣ ಹಂತದಲ್ಲಿದ್ದ ತೆಲಂಗಾಣ ನೂತನ ಸಚಿವಾಲಯದಲ್ಲಿ ಅಗ್ನಿ ಅವಘಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೆಲಂಗಾಣ ಸರ್ಕಾರದ ನಿರ್ಮಾಣ ಹಂತದಲ್ಲಿರುವ ನೂತನ ಸಚಿವಾಲಯದಲ್ಲಿ ಮುಂಜಾನೆ 3:30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಹೊಸ ಸಚಿವಾಲಯದ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದ ಬಲಭಾಗಕ್ಕೆ ಸ್ವಲ್ಪ ಹೊತ್ತಿನಲ್ಲೇ ಬೆಂಕಿ ವ್ಯಾಪಿಸಿದೆ. ಮಾಹಿತಿ ತಿಳಿದ ಕೂಡಲೇ ಸಚಿವಾಲಯಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ 11 ಅಗ್ನಿಶಾಮಕ ವಾಹನಗಳೊಂದಿಗೆ ಬೆಂಕಿಯನ್ನು ಹತೋಟಿಗೆ ತಂದರು.

ಶಾರ್ಟ್ ಸರ್ಕ್ಯೂಟ್‌ನಿಂದ ಹೊಸ ಸೆಕ್ರೆಟರಿಯೇಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಬೆಂಕಿ ಅವಘಡ ಸಂಭವಿಸಿದ ತಕ್ಷಣ ಎನ್‌ಟಿಆರ್ ಮಾರ್ಗದ ರಸ್ತೆಯನ್ನು ಎರಡೂ ಬದಿಗಳಲ್ಲಿ ಮುಚ್ಚಲಾಯಿತು. ಇದರಿಂದ ಬೆಳಗ್ಗೆ ತೆರಳುವ ವಾಹನ ಸವಾರರು ಪರದಾಡುವಂತಾಯಿತು. ನೆಲಮಹಡಿಯಲ್ಲಿ ಮರದ ಕೆಲಸ ನಡೆಯುತ್ತಿದ್ದ ಜಾಗದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಸೆಕ್ರೆಟರಿಯೇಟ್‌ನ ಮೊದಲ ಮಹಡಿಯವರೆಗೂ ಬೆಂಕಿ ವ್ಯಾಪಿಸಿದ್ದು, ದಟ್ಟ ಹೊಗೆ ಆವರಿಸಿತ್ತು.

ಆರಂಭದಲ್ಲೇ ಇಂತಹ ವಿಘ್ನವಾದ್ದರಿಂದ ಹಲವಾರು ಆರೋಪಗಳು ಕೇಳಿಬರುತ್ತಿದ್ದರೂ ಹೊಸ ಸೆಕ್ರೆಟರಿಯೇಟ್‌ನಲ್ಲಿ ಬೆಂಕಿ ಹೇಗೆ ಸಂಭವಿಸಿತು? ಬೆಂಕಿಗೆ ಕಾರಣಗಳೇನು? ಈ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!