ಗುರ್ಮೀತ್ ರಾಮ್​ ರಹೀಮ್​ ಪೆರೋಲ್ ಮೇಲೆ ಬಿಡುಗಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಹರಿಯಾಣದ ರೋಹ್ಟಕ್​ ಜಿಲ್ಲೆಯ ಸುನರಿಯಾ ಜೈಲಿನಲ್ಲಿರುವ ಡೇರಾ ಸಚ್ಚಾ ಸೌದಾ (Dera Sacha Sauda) ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್​ ಗೆ (Gurmeet Ram Rahim Singh) 40 ದಿನಗಳ ಪೆರೋಲ್ ಮೇಲೆ ಶನಿವಾರ ಬಿಡುಗಡೆ ಮಾಡಲಾಗಿದೆ.

ಮೂರು ತಿಂಗಳ ಹಿಂದಷ್ಟೇ ರಹೀಮ್ ಸಿಂಗ್​ಗೆ ಪೆರೋಲ್ ನೀಡಲಾಗಿತ್ತು. ನಿಯಮಗಳ ಅನುಸಾರ ಪೆರೋಲ್ ನೀಡಲಾಗಿದೆ ಎಂದು ರೋಹ್ಟಕ್​ನ ವಿಭಾಗೀಯ ಕಮಿಷನರ್ ಸಂಜೀವ್ ವರ್ಮಾ ತಿಳಿಸಿದ್ದಾರೆ.

ಈ ಹಿಂದೆ ಪೆರೋಲ್ ಅವಧಿ ನವೆಂಬರ್ 25ರಂದು ಮುಗಿದಿತ್ತು. ಆ ಅವಧಿಯಲ್ಲಿ ಆತ ಉತ್ತರ ಪ್ರದೇಶದ ಬರ್ಣವ ಆಶ್ರಮಕ್ಕೆ ತೆರಳಿದ್ದರು. ಇದೀಗ 40 ದಿನಗಳ ಪೆರೋಲ್ ಕೋರಿ ರಹೀಮ್ ಸಿಂಗ್ ಅರ್ಜಿ ಸಲ್ಲಿಸಿದ್ದ. ಅದನ್ನು ರೋಹ್ಟಕ್ ವಿಭಾಗೀಯ ಆಯುಕ್ತರಿಗೆ ಕಳುಹಿಸಿಕೊಡಲಾಗಿತ್ತು ಎಂದು ಹರಿಯಾಣದ ಜೈಲುಗಳ ಸಚಿವ ರಂಜಿತ್ ಸಿಂಗ್ ಚೌಟಾಲ ತಿಳಿಸಿದ್ದಾರೆ.

ರಹೀಮ್ ಸಿಂಗ್​ಗೆ ಇಬ್ಬರು ಶಿಷ್ಯರ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 16 ವರ್ಷಗಳ ಹಿಂದಿನ ಪತ್ರಕರ್ತನ ಕೊಲೆ ಪ್ರಕರಣದಲ್ಲಿಯೂ ರಾಮ್ ರಹೀಮ್ ಸಿಂಗ್ ಮತ್ತು ಇತರ ನಾಲ್ವರನ್ನು ಅಪರಾಧಿಗಳು ಎಂದು ಪರಿಗಣಿಸಿದ್ದ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!