ಸೈಲೆಂಟ್ ಆಗಿ ನಡೆಯುತ್ತಿದೆ ಕಾಂತಾರ- 2 ತಯಾರಿ: ಅತೀ ಮಹತ್ವದ ಮಾಹಿತಿ ಹಂಚಿಕೊಂಡ ವಿಜಯ್ ಕಿರಗಂದೂರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದಲ್ಲಿ ಸದ್ದು ಮಾಡಿ ಎಲ್ಲರನ್ನು ತನ್ನತ ಸೆಳೆದ ರಿಷಬ್ ಶೆಟ್ಟಿ (Rishabh Shetty) ನಿರ್ದೇಶನ ಹಾಗೂ ನಟನೆಯ ‘ಕಾಂತಾರ’ ಸಿನಿಮಾ.

ಕರಾವಳಿಯ ಸೊಬಗನ್ನು ಇಡೀ ವಿಶ್ವದಲ್ಲಿ ಪಸರಿಸಿ, ಬಾಕ್ಸ್ ಆಫೀಸ್ ನಲ್ಲೂ ಕೋಟಿ ಕೋಟಿ ಬಾಚಿಕೊಂಡಿದೆ.

ಇದೀಗ ‘ಕಾಂತಾರ 2’ ಸಿನಿಮಾ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಆ ಕುರಿತು ಯೋಚಿಸಿಯೇ ಇಲ್ಲವೆಂದು ರಿಷಬ್ ಶೆಟ್ಟಿ ಹೇಳಿದ್ದರು.
ಆದರೆ, ನಿರ್ಮಾಪಕ ವಿಜಯ್ ಕಿರಗಂದೂರು (Vijay Kirgandur) ಕಾಂತಾರ 2 ಸಿನಿಮಾ ಮಾಡುವ ಕುರಿತಾಗಿ ಮಾತನಾಡಿದ್ದಲ್ಲದೇ, ಸಿನಿಮಾ ಶೂಟಿಂಗ್ ಮತ್ತು ರಿಲೀಸ್ ದಿನಾಂಕವನ್ನೂ ಅವರು ಘೋಷಿಸಿ ಬಿಟ್ಟಿದ್ದಾರೆ.

ವಿಜಯ್ ಕಿರಗಂದೂರು ಅವರೇ ಹೇಳಿದಂತೆ ಈ ವರ್ಷ ಜೂನ್ ನಿಂದ ಚಿತ್ರೀಕರಣ ಶುರುವಾಗಲಿದೆ. ಏಪ್ರಿಲ್ ಅಥವಾ ಮೇ 2024ರಂದು ಕಾಂತಾರ 2 ಚಿತ್ರ ತೆರೆಗೆ ಬರಲಿದೆಯಂತೆ.

ಕಾಂತಾರ ಸಿನಿಮಾ ಶೂಟ್ ಮಾಡುವಾಗ ಹಲವು ತೊಂದರೆಗಳನ್ನು ಅವರು ಎದುರಿಸಬೇಕಾಯಿತು. ಹಾಗಾಗಿ ಬಜೆಟ್ ಕೂಡ ಹೆಚ್ಚಾಯಿತು. ಈ ಬಾರಿ ಎಲ್ಲ ಮುನ್ನೆಚ್ಚರಿಕೆಗಳನ್ನು ತಗೆದುಕೊಂಡು ಶೂಟಿಂಗ್ ಗೆ ಇಳಿಯುವುದಾಗಿ ನಿರ್ಮಾಪಕರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ಕಾಂತಾರ 2 ಕಥೆ ಏನು, ಯಾರೆಲ್ಲ ಇರುತ್ತಾರೆ, ಯಾವ ಸ್ಥಳದಲ್ಲಿ ಶೂಟ್ ಮಾಡುತ್ತಾರೆ, ಅಚ್ಚರಿ ಎನ್ನುವಂತಹ ಕಲಾವಿದರು ಇರುತ್ತಾರಾ ಈ ಕುರಿತು ಅವರು ಯಾವುದೇ ಮಾಹಿತಿಯನ್ನೂ ಹಂಚಿಕೊಂಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!