ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ಲಬ್ಗೆ ಬಂದ ಮಹಿಳೆಯೊಂದಿಗೆ ಬೌನ್ಸರ್ಗಳು ಅನುಚಿತವಾಗಿ ವರ್ತಿಸಿರುವ ಘಟನೆ ನಡೆದಿದೆ. ಮೇಲಾಗಿ ಈ ಬಗ್ಗೆ ಪ್ರಶ್ನೆ ಮಾಡಿದ ಆಕೆಯ ಸ್ನೇಹಿತ ಹಾಗೂ ಮಹಿಳೆಯ ಮೇಲೂ ಹಲ್ಲೆ ನಡೆಸಿದ್ದಾರೆ. ಹರಿಯಾಣದ ಗುರ್ಗಾಂವ್ ನಲ್ಲಿ ಕಳೆದ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಇದೀಗ ವೈರಲ್ ಆಗಿದೆ.
ಪೊಲೀಸರ ಪ್ರಕಾರ, ಮಹಿಳೆಯೊಬ್ಬಳು ತನ್ನ ಸ್ನೇಹಿತರೊಂದಿಗೆ ಸ್ಥಳೀಯ ಉದ್ಯೋಗ ವಿಹಾರದಲ್ಲಿರುವ ಕ್ಯಾಸಾ ಎಂಬ ನೈಟ್ ಕ್ಲಬ್ಗೆ ಬಂದಿದ್ದ ವೇಳೆ ಅಲ್ಲಿಯೇ ಗೇಟ್ನಲ್ಲಿ ಬೌನ್ಸರ್ ಆಕೆಯ ದೇಹವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದಕ್ಕೆ ಆಕೆ ಆಕ್ಷೇಪ ವ್ಯಕ್ತಪಡಿಸಿ, ಸ್ನೇಹಿತರಿಗೆ ತಿಳಿಸಿದ್ದಾಳೆ. ಆಕೆಯ ಸ್ನೇಹಿತರು ಕೂಡ ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಗಲಾಟೆ ಶುರುವಾಗಿದೆ. ತಕ್ಷಣವೇ ಇತರ ಬೌನ್ಸರ್ಗಳು ಮತ್ತು ಮ್ಯಾನೇಜರ್ ಅಲ್ಲಿಗೆ ತಲುಪಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ದಾಳಿಯಲ್ಲಿ ಗಾಯಗೊಂಡವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬೌನ್ಸರ್ಗಳ ಸಮೇತ ಮ್ಯಾನೇಜರ್ನನ್ನು ಬಂಧಿಸಿದ್ದಾರೆ.
Gurugram, Haryana | A man, who went with his friends to Club Casa Danza in Udyog Vihar on the intervening night of Aug 7-8 was beaten by several bodyguards after one of them allegedly molested a female friend in their group.
(Vid source: Complainant)
(Note- Abusive language) pic.twitter.com/APAn2SNyCd— ANI (@ANI) August 10, 2022