ಹೊಸದಿಗಂತವ ವರದಿ, ಹುಬ್ಬಳ್ಳಿ:
ವಾಸ್ತು ತಜ್ಞ ಚಂದ್ರಶೇಖರ ಗುರೂಜಿಯ ಅಂತ್ಯ ಕ್ರಿಯೆಯನ್ನು ವೀರಶೈವ ಲಿಂಗಾಯತ ವಿಧಿ ವಿಧಾನ ಪ್ರಕಾರ ಮಾಡಲು ಸಿದ್ಧತೆ ಮಾಡಿಕೊಳ್ಳಾಗಿದೆ ಎಂದು ಮೂರು ಸಾವಿರ ಮಠದ ಕೋಟ್ರೇಶ ಸ್ವಾಮಿಜಿ ತಿಳಿಸಿದ್ದಾರೆ.
ನಗರದ ಸುಳ್ಳ ರಸ್ತೆಯಲ್ಲಿರುವ ಶಿವಪ್ರಭು ಲೇಔಟ್ ನಲ್ಲಿರುವ ಗುರೂಜಿಗೆ ಸೇರಿದ ಹೊಲದಲ್ಲಿ ನಡೆಯುತ್ತಿವೆ. ಅದಕ್ಕಾಗಿ, ಹನ್ನೊಂದು ಅರ್ಚಕರು ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದರು.
ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ಶವವನ್ನು ಕೂರಿಸಿ ಅಂತ್ಯಕ್ರಿಯೆ ಮಾಡಲಾಗುತ್ತದೆ. ಆದರೆ, ಗುರೂಜಿ ಅವರ ಮರಣೋತ್ತರ ಪರೀಕ್ಷೆ ಮಾಡಿ, ಶವವನ್ನು ಪ್ಲಾಸ್ಟಿಕ್ ನಿಂದ ಪ್ಯಾಕ್ ಮಾಡಿರುತ್ತಾರೆ. ಹೀಗಾಗಿ ಮಲಗಿಸಿ ಅಂತಿಮ ವಿಧಿವಿಧಾನ ನೆರವೇರಿಸಲಾಗುವುದು ಎಂದು ತಿಳಿಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ