ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇತ್ತ ಅವರ ಪುತ್ರಿಯ ಭವಿಷ್ಯಕ್ಕೆ ನಾನು ನೆರವಾಗುವುದಾಗಿ ನಟ ಜಗ್ಗೇಶ್ ಘೋಷಿಸಿದ್ದಾರೆ.
ಗುರುಪ್ರಸಾದ್ ಜೊತೆ ‘ಮಠ’, ‘ಎದ್ದೇಳು ಮಂಜುನಾಥ’, ‘ರಂಗನಾಯಕ’ ಸಿನಿಮಾಗಳಲ್ಲಿ ಜಗ್ಗೇಶ್ ಕೆಲಸ ಮಾಡಿದ್ದರು. ಇದೀಗ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿರೋದ್ದಕ್ಕೆ ಜಗ್ಗೇಶ್ ಕಂಬನಿ ಮಿಡಿದಿದ್ದಾರೆ. ಅವರ ಕುಟುಂಬಕ್ಕೆ ಸಹಾಯ ಮಾಡಲು ಜಗ್ಗೇಶ್ ಮುಂದಾಗಿದ್ದಾರೆ. ಗುರುಪ್ರಸಾದ್ ಅವರ ಮಗುವಿನ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ನಿಮ್ಮ ಬೆಳವಣಿಗೆಯ ಹಿಂದೆ ಒಬ್ಬ ಗುರು ಇರಬೇಕು. ಯಾರಿಗೆ ಒಳ್ಳೆಯ ಗುರು ಇರುತ್ತಾರೆ ಅವರು ಸಕ್ಸಸ್ ಆಗುತ್ತಾರೆ. ಅವರಿಗೆ ಗುರು ಇರಲಿಲ್ಲ. ಆದರೆ ತಾಯಿಯೇ ಅವರಿಗೆ ಗುರು ಆಗಿದ್ದರು. ಅವರಿಗೂ ಬೈಯುತ್ತಿದ್ದರು. ಅದೆಲ್ಲಾ ನಮಗೆ ಸಹಿಸಿಕೊಳ್ಳೋಕೆ ಆಗುತ್ತಿರಲಿಲ್ಲ. ಆದರೆ ಗುರುಪ್ರಸಾದ್ ಮಗುವಿಗೆ ಸಹಾಯ ಮಾಡುತ್ತೇನೆ. ಸಂಕಲ್ಪ ಮಾಡಿಕೊಂಡಿದ್ದೇನೆ, ಅದನ್ನು ಹೇಳೋಕೆ ಹೋಗಲ್ಲ. ಸಹಾಯವನ್ನು ಅವರಿಗೆ ತಲುಪಿಸುತ್ತೇನೆ ಎಂದು ಜಗ್ಗೇಶ್ ತಿಳಿಸಿದ್ದಾರೆ.