ಸಿದ್ಧರಾಮಯ್ಯ ಕುರಿತು ಗುಸು ಗುಸು: ಕ್ಷಮೆಯಾಚಿಸಿದ ಕಾಂಗ್ರೆಸ್ ಮುಖಂಡ ಮುಕುಡಪ್ಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಬಗ್ಗೆ ನಿನ್ನೆ ಸುದ್ಧಿಗೋಷ್ಠಿ ಕಾಂಗ್ರೆಸ್ ಮುಖಂಡ ಕೆ.ಮುಕುಡಪ್ಪ ಅವಾಚ್ಯ ಪದ ಬಳಕೆ ಮಾಡಿದ್ದು, ಎಲ್ಲೆಡೆ ಭಾರೀ ಸಂಚಲನ ಮೂಡಿಸಿತ್ತು.

ಇದೀಗ ಕುರುಬ ಸಮುದಾಯದ ಮುಕುಡಪ್ಪ ಸಿದ್ದರಾಮಯ್ಯನ ಅವರ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದಾರೆ.

ನಾನು ಮತ್ತು ಪುಟ್ಟಸ್ವಾಮಿ ಕುರಿ ಹಾಗೂ ಟಗರು ಬಗ್ಗೆ ಮಾತನಾಡುತ್ತಿದ್ದೆವು. ಬೊಮ್ಮಾಯಿ 20 ಕುರಿ ಹಾಗೂ ಒಂದು ಟಗರು ನೀಡುವ ಯೋಜನೆ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಆ ವೇಳೆ ಒಂದೇ ಟಗರು 20 ಕುರಿಗಳನ್ನು ನೋಡಿಕೊಳ್ಳುತ್ತದೆ ಎಂದಿದ್ದು ನಿಜ. ಆದರೆ ಸಿದ್ದರಾಮಯ್ಯ ಬಗ್ಗೆ ಆ ಪದ ಹೇಳಿದ್ದೇನೆ ಎಂದು ಬಿಂಬಿತವಾಗಿದೆ. ಇದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಕುರುಬರ ಸಂಘ ಹಾಗೂ ಮಠ ಕಟ್ಟಿದ್ದಾರೆ. ಕುರುಬ ಸಮುದಾಯಕ್ಕೆ ಕೊಡುಗೆ ನೀಡಿದ್ದಾರೆ. ನಾನೂ ಆ ಸಂದರ್ಭದಲ್ಲಿ ಅವರ ಜೊತೆ ಇದ್ದೆ ಎಂದು ಹೇಳಿದರು.

ಪಿಸು ಮಾತು
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಹಿಂದುಳಿದ ಹಾಗೂ ದಲಿತ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಕೆ.‌ಮುಕುಡಪ್ಪ ನ.9ರಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಗೂ ಮುನ್ನ ಇತರ ಮುಖಂಡರ ಜೊತೆ ಅನೌಪಚಾರಿಕವಾಗಿ ಮಾತನಾಡುತ್ತಿದ್ದ ಅವರು ಈ ವೇಳೆ ಅವಹೇಳನಕಾರಿ ಪದಗಳನ್ನು ಬಳಕೆ ಮಾಡಿದ್ದರು.

ಮುರುಘಾ ಶರಣರಿಗೆ ಹೋಲಿಕೆ ಮಾಡಿ ಸಿದ್ದರಾಮಯ್ಯನವರ ವೈಯಕ್ತಿಕ ಹಾಗೂ ಖಾಸಗಿ ವಿಚಾರಗಳ ಬಗ್ಗೆಯೂ ಉಲ್ಲೇಖಿಸಿದ್ದರು. ಮುಕುಡಪ್ಪ ಸಿದ್ದರಾಮಯ್ಯ ಕುರಿತಾಗಿ ಬಳಕೆ ಮಾಡಿರುವ ಪದಗಳು ಮಾಧ್ಯಮಗಳ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!