ನನಸಾಗಲಿಲ್ಲ ವಿಶ್ವಕಪ್‌ ಗೆಲುವಿನ ಕನಸು: ಡಗೌಟ್​ನಲ್ಲಿ ಕಣ್ಣೀರಿಟ್ಟ ನಾಯಕ ರೋಹಿತ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್‌ನಿಂದ ಸೆಮಿಫೈನಲ್​ನಲ್ಲಿ ಭಾರತ ವಿರುದ್ಧ ಇಂಗ್ಲೆಂಡ್ 10 ವಿಕೆಟ್​ಗಳ ರೋಚಕ ಗೆಲುವು ಸಾಧಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಈ ಮೂಲಕ ಸೋತ ರೋಹಿತ್ ಪಡೆ ಟೂರ್ನಿ ಯಿಂದ ಹೊರನಡೆದಿದೆ.

ಭಾರತದ ಸ್ಟಾರ್ ಆಟಗಾರರು ಈ ಮಹತ್ವದ ಪಂದ್ಯದಲ್ಲಿ ತೀವ್ರ ನಿರಾಸೆ ಮೂಡಿಸಿದರು. ಈ ಮೂಲಕ ಭಾರತೀಯ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆಯಾಗಿದೆ.

ಇತ್ತ ಇಂಗ್ಲೆಂಡ್ ವಿರುದ್ಧ ಹೀನಾಯವಾಗಿ ಸೋತ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಡಗೌಟ್​ನಲ್ಲಿ ಕುಳಿತು ಕಣ್ಣೀರಿಟ್ಟಿರುವ ವಿಡಿಯೋ ವೈರಲ್ ಆಗುತ್ತಿದೆ.
ಕೋಚ್ ರಾಹುಲ್ ದ್ರಾವಿಡ್ ಸಮಾಧಾನ ಪಡಿಸಿದರೂ ರೋಹಿತ್‍ಗೆ ದುಃಖ ತಡೆಯಲು ಸಾಧ್ಯವಾಗಲಿಲ್ಲ. ಈ ವಿಡಿಯೋ ಇದೀಗ ವೈರಲ್ ಆಗಿದೆ.

ಸೋಲಿನ ಬಳಿಕ ಪೆವಿಲಿಯನ್‌ಗೆ ಆಗಮಿಸಿದ ರೋಹಿತ್ ಶರ್ಮಾ ನೋವಿನಿಂದಲೇ ಯಾರ ಜೊತೆಗೂ ಮಾತನಾಡಿಲ್ಲ. ಅತೀವ ದುಃಖ ತಡೆಯಲಾಗದೇ ಕಣ್ಣೀರಿಟ್ಟರು. ಆದರೆ ಕ್ಯಾಮಾರ ಕಣ್ಮಿಗೆ ಬೀಳದಂತೆ ಕೆಳಕ್ಕೆ ಮುಖ ಮಾಡಿದರು.

ಇತ್ತ ಸಾಮಾಜಿಕ ಜಾಲತಾಣಧಲ್ಲಿ ಟೀಂ ಇಂಡಿಯಾ ಹಾಗೂ ಕ್ರಿಕೆಟಿಗರನ್ನು ಹಿಗ್ಗಾ ಮುಗ್ಗ ಟ್ರೋಲ್ ಮಾಡಲಾಗುತ್ತದೆ. ಚೋಕರ್ಸ್, ಬಾಯ್ಕಾಟ್ ಐಪಿಎಲ್, ರೋಹಿತ್ ನಾಯಕತ್ವ, ಟೀಂ ಇಂಡಿಯಾ ಕಳಪೆ ಪ್ರದರ್ಶನ ಸೇರಿದಂತೆ ಹಲವು ವಿಚಾರಗಳು ಟ್ರೆಂಡ್ ಆಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!