ಅರ್ಚರಿ ವಿಶ್ವಕಪ್‌ ನಲ್ಲಿ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ದಕ್ಷಿಣ ಕೊರಿಯಾದ ಗ್ವಾಂಗ್ಜುನಲ್ಲಿ ನಡೆದ ಆರ್ಚರಿ ವಿಶ್ವಕಪ್‌ ನ ಎರಡನೇ ಹಂತದ ಪಂದ್ಯಾವಳಿಯಲ್ಲಿ ಭಾರತದ ಪುರುಷ ಆರ್ಚರಿ ತಂಡವು ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ಅಭಿಷೇಕ್ ವರ್ಮಾ, ಅಮನ್ ಸೈನಿ ಮತ್ತು ರಜತ್ ಚೌಹಾಣ್ ಅವರನ್ನೊಳಗೊಂಡ ತಂಡವು ಸತತ ಎರಡನೇ ಬಾರಿಗೆ ವಿಶ್ವಕಪ್ ಚಿನ್ನದ ಪದಕಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ಈ ಹಿಂದೆ ಏಪ್ರಿಲ್‌ನಲ್ಲಿ ಟರ್ಕಿಯ ಅಂಟಲ್ಯದಲ್ಲಿ ನಡೆದ ವಿಶ್ವಕಪ್‌ ಟೂರ್ನಿಯಲ್ಲಿಯೂ ಈ ತಂಡ ಚಿನ್ನ ಗೆದ್ದಿತ್ತು.

ಶನಿವಾರ ನಡೆದ ಫೈನಲ್ ‌ಹಂತದ ಪಂದ್ಯದಲ್ಲಿ ಭಾರತವು ಫ್ರಾನ್ಸ್ ವಿರುದ್ಧ ಎರಡು ಪಾಯಿಂಟ್‌ಗಳಿಂದ ಮೇಲುಗೈ ಸಾಧಿಸಿ ಚಿನ್ನದ ಪದಕವನ್ನು ಗೆದ್ದುಕೊಂಡಿತು.
ಮೊದಲ ಎರಡು ಸುತ್ತುಗಳಲ್ಲಿ ಸಮಬಲದ ಪ್ರದರ್ಶನ ತೋರಿದ ಭಾರತೀಯ ತಂಡ 3 ನೇ ಹಂತದಲ್ಲಿ ಪರಿಪೂರ್ಣ ಪ್ರದರ್ಶನ ನೀಡುವುದರೊಂದಿಗೆ 232-230 ರಲ್ಲಿ ಫ್ರಾನ್ಸ್ ತಂಡವನ್ನು ಮಣಿಸಿತು. ಇದಕ್ಕೂ ಮುನ್ನ ನಡೆದ ಸೆಮಿಫೈನಲ್‌ನಲ್ಲಿ ರೋಚಕ ಶೂಟ್‌ ಆಫ್‌ನಲ್ಲಿ ಆತಿಥೇಯ ಕೊರಿಯಾವನ್ನು ಮಣಿಸುವ ಮೂಲಕ ಭಾರತೀಯರು ಫೈನಲ್‌ ಗೆ ಲಗ್ಗೆ ಇಟ್ಟಿದ್ದರು.
ಏಪ್ರಿಲ್‌ನಲ್ಲಿ ಅಂಟಲ್ಯದಲ್ಲಿ ನಡೆದ ಹಿಂದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತವು ಫ್ರಾನ್ಸ್ ಅನ್ನು ಒಂದು ಪಾಯಿಂಟ್‌ನಿಂದ ಸೋಲಿಸಿ ಚಿನ್ನ ಗೆದ್ದಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!