ನಾನು ಅಮೆರಿಕದ ಅಧ್ಯಕ್ಷನಾದರೆ ಎಚ್1ಬಿ ವೀಸಾ ಯೋಜನೆ ರದ್ದು: ವಿವೇಕ್ ರಾಮಸ್ವಾಮಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಾನು ಅಮೆರಿಕದ ಅಧ್ಯಕ್ಷನಾದರೆ ಎಚ್1ಬಿ ವೀಸಾ ಯೋಜನೆಯನ್ನೇ (H-1B Visa) ರದ್ದುಗೊಳಿಸುತ್ತೇನೆ ಎಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ (Vivek Ramaswamy) ಹೇಳಿದ್ದಾರೆ.

ಎಚ್ -1 ಬಿ ವೀಸಾ ನೀಡುವ ವ್ಯವಸ್ಥೆಯನ್ನು ಗುಲಾಮಗಿರಿಯ ಒಪ್ಪಂದ ಎಂದು ಕರೆದಿರುವ ಭಾರತೀಯ-ಅಮೆರಿಕನ್ ರಿಪಬ್ಲಿಕನ್ ಅಧ್ಯಕ್ಷೀಯ ಆಕಾಂಕ್ಷಿ ವಿವೇಕ್ ರಾಮಸ್ವಾಮಿ, 2024 ರಲ್ಲಿ ನಡೆಯುವ ಚುನಾವಣೆಯಲ್ಲಿ ತಾವು ಗೆದ್ದರೆ ಚ್ -1 ಬಿ ವೀಸಾ ವ್ಯವಸ್ಥೆಯನ್ನು ರದ್ದುಗೊಳಿಸುವುದಾಗಿ ಮತ್ತು ಅರ್ಹತೆಯ ಆಧಾರದ ಮೇಲೆ ವೀಸಾ ನೀಡುವ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಘೋಷಿಸಿದ್ದಾರೆ.

ಭಾರತೀಯರಿಂದ ಹೆಚ್ಚಿನ ಬೇಡಿಕೆ ಹೊಂದಿರುವ ಎಚ್ -1 ಬಿ ವೀಸಾ ವಲಸೆಯೇತರ ವೀಸಾವಾಗಿದ್ದು, ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಕಾರ್ಮಿಕರನ್ನು ನೇಮಿಸಿಕೊಳ್ಳಲು ಯುಎಸ್ ಕಂಪನಿಗಳಿಗೆ ಅವಕಾಶ ನೀಡುತ್ತದೆ.

2018 ರಿಂದ 2023 ರವರೆಗೆ, ಯುಎಸ್ ಪೌರತ್ವ ಮತ್ತು ವಲಸೆ ಸೇವಾ ಇಲಾಖೆಯು ರಾಮಸ್ವಾಮಿ ಅವರ ಕಂಪನಿ ರೋಯಿವಾಂಟ್ ಸೈನ್ಸ್​ಗೆ ಎಚ್ -1 ಬಿ ವೀಸಾ ಅಡಿಯಲ್ಲಿ 29 ಉದ್ಯೋಗಿಗಳ ವೀಸಾಗಳನ್ನು ಅನುಮೋದಿಸಿದೆ. ಆದರೆ ಎಚ್ -1 ಬಿ ವ್ಯವಸ್ಥೆಯು ಕಂಪನಿಗಳು ಹಾಗೂ ಉದ್ಯೋಗಿಗಳು ಇಬ್ಬರಿಗೂ ಮಾರಕವಾಗಿದೆ ಎಂದು ರಾಮಸ್ವಾಮಿ ಹೇಳಿದ್ದಾರೆ.

ಈಗಿನ ಲಾಟರಿ ವ್ಯವಸ್ಥೆಯನ್ನು ನಿಜವಾದ ಅರ್ಹತೆಯ ಆಧಾರದ ವ್ಯವಸ್ಥೆಯಿಂದ ಬದಲಾಯಿಸಬೇಕಾಗಿದೆ. ಇದು ಎಚ್ -1 ಬಿ ವಲಸಿಗರು ಅವರನ್ನು ಪ್ರಾಯೋಜಿಸಿದ ಕಂಪನಿಯ ಲಾಭಕ್ಕಾಗಿ ಮಾತ್ರ ಕೆಲಸಕ್ಕೆ ಸೇರುವ ಗುತ್ತಿಗೆ ಗುಲಾಮಗಿರಿಯ ಒಂದು ರೂಪವಾಗಿದೆ. ನಾನಿದನ್ನು ಅಂತ್ಯಗೊಳಿಸಲು ಬಯಸುವೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!