ಇದ್ಯಾವ ಪರಿ ಕೇಶ ವಿನ್ಯಾಸ ಗುರುವೇ?!: ನೀವು ಸ್ವಲ್ಪ ನೋಡಿ ಕಣ್ತುಂಬಿಕೊಳ್ಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂಟರ್ನೆಟ್ ಸದಾ ಕುತೂಹಲಕಾರಿ ವಿಡಿಯೋ, ದೃಶ್ಯಗಳು ಕಾಣಸಿಗುತ್ತಲೇ ಇರುತ್ತವೆ. ಲಂಡನ್‌ನ ಕೇಶ ಕಲಾವಿದರೊಬ್ಬರು ಮಹಿಳೆಯ ತಲೆಯ ಮೇಲೆ ಅದ್ಭುತವಾದ ಶಿಲ್ಪವನ್ನು ರಚಿಸಿದ್ದಾರೆ. ಅದನ್ನು ವಿಡಿಯೋ ಮಾಡಿ ಅದೇ ಕ್ಲಿಪ್ ಅನ್ನು ಇನ್‌ಸ್ಟಾಗ್ರಾಂನ ಅಧಿಕೃತ ಹ್ಯಾಂಡಲ್‌ನಿಂದ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಏನ್‌ ಕ್ರೇಜ್‌ ಅಂತೀರಾ ಇದುವರೆಗೂ ವಿಡಿಯೋವನ್ನು 17.1 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ.

ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಶಮಾರಾ ರೋಪರ್ ಎಂಬ ಕೇಶವಿನ್ಯಾಸಕಿ, ಮಾಡೆಲ್ ತಲೆಯ ಮೇಲೆ ಶಿಲ್ಪವನ್ನು ರಚಿಸುವುದನ್ನು ಕಾಣಬಹುದು. ಮಾಡೆಲ್‌ನ ಕೂದಲನ್ನು ಎಳೆದುಕಟ್ಟಿ ಕೆಲವು ಚೌಕಟ್ಟುಗಳನ್ನು ತಯಾರಿಸಿದಳು. ಇನ್ನೂ ಅಂದವಾಗಿ ಕಾಣಲೆಂದು ಅವುಗಳ ಮಧ್ಯದಲ್ಲಿ ಮುದ್ದಾದ ಟೆಡ್ಡಿ ಬೇರ್‌ಗಳನ್ನು ಜೋಡಿಸಿ ಒಂದು ಆಕಾರ ಕೊಟ್ಟಿದ್ದಾರೆ. ಆ ವಿಡಿಯೋವನ್ನು ನೀವು ನೋಡಿ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!