ಬೇಸಿಗೆಯಲ್ಲಿ ತೀಕ್ಷ್ಣವಾದ ಸೂರ್ಯನ ಕಿರಣಗಳು ಕೂದಲನ್ನು ಒಣಗಿಸಿ ಹಾನಿಗೊಳಿಸಬಹುದು. ಕೂದಲು ಒರಟಾಗುವುದು, ಎಣ್ಣೆ ಅಂಶ ಹೆಚ್ಚಾಗುವುದು, ಅಥವಾ ಕೂದಲು ಡ್ರೈ ಆಗುವುದು ಇತ್ಯಾದಿ ಸಮಸ್ಯೆಗಳನ್ನು ತಪ್ಪಿಸಲು ಸರಿಯಾದ ಕೂದಲಿನ ಆರೈಕೆ ಅಗತ್ಯ. ಬೇಸಿಗೆ ಹೊತ್ತಿನಲ್ಲಿ ಕೂದಲನ್ನು ಆರೋಗ್ಯಕರವಾಗಿರಿಸಲು 5 ಪ್ರಮುಖ ಸಲಹೆಗಳು ಇಲ್ಲಿದೆ:
ಕೂದಲಿಗೆ ರಕ್ಷಣೆ ನೀಡಿ
ಸೂರ್ಯನ ತೀವ್ರತೆಯಿಂದ ಕೂದಲು ಒಣಗುತ್ತದೆ. ಹೀಗಾಗಿ, ಟೋಪಿ, ಸ್ಕಾರ್ಫ್ ಧರಿಸುವುದು ಅಥವಾ ಸನ್ ಪ್ರೊಟೆಕ್ಷನ್ ಸೀರಂ ಬಳಸುವುದು ಒಳಿತು.
ಶಾಂಪೂ ಬಳಕೆ ಕಡಿಮೆ ಇರಲಿ
ಬೇಸಿಗೆಯಲ್ಲಿ ರಾಸಾಯನಿಕಯುಕ್ತ ಶಾಂಪೂ ಬಳಸುವುದು ಕೂದಲಿನ ನೈಸರ್ಗಿಕ ತೈಲವನ್ನು ತೆಗೆದುಹಾಕಿ ಕೂದಲಿನಲ್ಲಿ ಶುಷ್ಕತೆ ಉಂಟುಮಾಡುತ್ತದೆ. ಹೀಗಾಗಿ, ವಾರದಲ್ಲಿ 2-3 ಬಾರಿ ಮಾತ್ರ ಕೂದಲು ತೊಳೆಯಿರಿ.
ತೇವಾಂಶದ ಬಳಕೆ ಹೆಚ್ಚಿಸಿ
ಬೇಸಿಗೆಯಲ್ಲಿ ಕೂದಲು ಡ್ರೈ ಆಗುವುದು ಸಾಮಾನ್ಯ. ಅದಕ್ಕಾಗಿ ತೇವಾಂಶ ನೀಡಲು ಹೇರ್ ಆಯಿಲ್ ಅಥವಾ ಡೀಪ್ ಕಂಡಿಷನರ್ ಬಳಸಿ.
ಹೇರ್ ಮಾಸ್ಕ್
ನೀವು ಸ್ನಾನ ಮಾಡುವ ಮೊದಲು ಹೇರ್ ಮಾಸ್ಕ್ ಹಾಕಬೇಕು. ಮಾಸ್ಕ್ ಹಾಕಿದ ನಂತರ 10-15 ನಿಮಿಷ ಹಾಗೆಯೇ ಬಿಟ್ಟು ನಂತರ ಶಾಂಪೂ ಹಾಕಿ ಸ್ನಾನ ಮಾಡಿ. ಹೇರ್ ಮಾಸ್ಕ್ ಹಾಕಿದರೆ ಬೇಸಿಗೆಯ ಬಿಸಿಲಿನಿಂದ ಕೂದಲು ಡ್ಯಾಮೇಜ್ ಆಗುವುದಿಲ್ಲ.
ಹಿತಕರ ಆಹಾರ ಸೇವನೆ
ಸಮತೋಲನ ಆಹಾರ ಕೂದಲಿಗೆ ಮುಖ್ಯ. ವಿಟಮಿನ್, ಪ್ರೋಟೀನ್, ಮತ್ತು ಒಮೇಗಾ-3 ಫ್ಯಾಟಿ ಆಮ್ಲಗಳನ್ನೊಳಗೊಂಡ ಆಹಾರ ಸೇವಿಸಿ ಕೂದಲನ್ನು ಆರೋಗ್ಯಕರವಾಗಿಡಿ.