ತಲೆ ತುಂಬಾ ಕೂದಲಿರೋರಿಗೆ ಇದೆಲ್ಲಾ ವಿಷಯವೇ ಅಲ್ಲ, ಆದರೆ ಒಂದು ಕೂದಲು ಉದ್ರಿದ್ರೂ ಕೂದಲು ಕಡಿಮೆಯಾಗುತ್ತಿದೆ ಎನ್ನುವವರಿಗೆ ಇದು ಮುಖ್ಯ. ನಾವು ಎಲ್ಲಿ ತಪ್ಪು ಮಾಡ್ತಿದ್ದೇವೆ? ಕೂದಲು ಯಾಕೆ ಹಾಳಾಗ್ತಿದೆ ಅನ್ನೋರಿಗೆ ಇಲ್ಲಿ ಕೆಲವು ಉಪಯುಕ್ತ ಮಾಹಿತಿ ಇದೆ..
ಕೂದಲು ತೊಳೆಯುವಾಗ ಯಾವಾಗಲೂ ಬುಡದಿಂದ, ಕೂದಲ ತುದಿವರೆಗೂ ಶಾಂಪೂ ಹಾಕುವ ಅಭ್ಯಾಸ ನಿಮ್ಮದಾ? ಇದನ್ನು ನಿಲ್ಲಿಸಿ, ಕೂದಲಿಗೆ ಎಣ್ಣೆಯೂ ಬೇಡ, ಶಾಂಪೂ ಬೇಡ, ಬರೀ ಕಂಡೀಷನರ್ ಬಳಸಿದ್ರೆ ಸಾಕು. ಹೌದು, ಬುಡಕ್ಕೆ ಮಾತ್ರ ಶಾಂಪೂ ಮಾಡಿ, ಕೂದಲಿಗೆ ಏನೂ ಹಾಕಬೇಡಿ!
ಕೂದಲಿಗೆ ಶಾಂಪೂ ಮಾಡುವ ಸ್ಟೆಪ್ಸ್
ಸ್ಟೆಪ್ 1 : ಕೂದಲನ್ನು ನೀರಿನಲ್ಲಿ ಚೆನ್ನಾಗಿ ನೆನೆಸಿ, ಒಂದು ಚೊಂಬು ನೀರು ಹಾಕಿದ ತಕ್ಷಣವೇ ಶಾಂಪೂ ಬೇಡ, ಕೂದಲು ಚೆನ್ನಾಗಿ ನೆನೆಯಲಿ.
ಸ್ಟೆಪ್ 2 : ನಿಮ್ಮ ಶಾಂಪೂ ಯಾವುದು ಎನ್ನುವ ಬಗ್ಗೆಯೂ ಗಮನ ಇರಲಿ, ಬುಡಕ್ಕೆ ಮಾತ್ರ ಶಾಂಪೂ ಮಾಡಿ, ಶಾಂಪೂಗೆ ನೀರು ಹಾಕಿ ನಂತರ ತಲೆಗೆ ಹಾಕಿ, ಒಂದೇ ಬಾರಿಗಿಂತ, ಎರಡು ಬಾರಿ ಸ್ವಲ್ಪ ಸ್ವಲ್ಪ ಹಾಕಿ ತೊಳೆಯಿರಿ.
ಸ್ಟೆಪ್ 3 : ನೀರು ಹಾಕಿ ಚೆನ್ನಾಗಿ ತೊಳೆದ ನಂತರ ಕಂಡೀಷನರ್ ಹಾಕಿ, ಕಂಡೀಷನರ್ ಬುಡಕ್ಕೆ ಹಾಕಿದರೆ ಹೊಟ್ಟಿನ ಸಮಸ್ಯೆ ಆಗುತ್ತದೆ, ಬರೀ ಕೂದಲಿಗೆ ಮಾತ್ರ ಕಂಡೀಷನರ್ ಹಾಕಿ. ಚೆನ್ನಾಗಿ ನೀರು ಹಾಕಿ ತೊಳೆಯಿರಿ.
ಸ್ಟೆಪ್ 4 : ಯಾವಾಗಲೂ ಆರ್ಟಿಫಿಶಿಯಲ್ ಆಗಿ ಕೂದಲನ್ನು ಡ್ರೈ ಮಾಡುವ ಅಭ್ಯಾಸ ಬೇಡ, ತೆಳು ಬಿಸಿಲಿಗೆ, ಸಣ್ಣ ಗಾಳಿಗೆ ಕೂದಲನ್ನು ಒಣಗಿಸಿ, ಮೃದುವಾದ ಬಟ್ಟೆಯನ್ನು ಸುತ್ತಿ ಒಣಗಿಸಿ.