Thursday, March 30, 2023

Latest Posts

ತ್ಯಾಜ್ಯ ಯಾರ್ಡ್ ಬೆಂಕಿ ಪ್ರಕರಣದ ತನಿಖೆಗೆ ಮೂರು ಹಂತದ ಸಮಿತಿ: ಕೇರಳ ಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೊಚ್ಚಿಯ ಬ್ರಹ್ಮಪುರಂನಲ್ಲಿರುವ ತ್ಯಾಜ್ಯ ಡಂಪ್ ಯಾರ್ಡ್ ಬೆಂಕಿಯ ಬಗ್ಗೆ ತನಿಖೆ ನಡೆಸಲು ವೈಜ್ಞಾನಿಕ ತಜ್ಞರನ್ನು ಒಳಗೊಂಡ ವಿಶೇಷ ಮೂರು ಹಂತದ ಸಮಿತಿಯನ್ನು ರಚಿಸಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಬುಧವಾರ ಘೋಷಿಸಿದ್ದಾರೆ. ಇಂದು ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ವಿಜಯನ್, ಬ್ರಹ್ಮಪುರಂ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣವನ್ನು ರಾಜ್ಯ ಪೊಲೀಸರ ವಿಶೇಷ ತನಿಖಾ ತಂಡ ತನಿಖೆ ನಡೆಸಲಿದೆ. ಬೆಂಕಿಯ ಕಾರಣ ಮತ್ತು ಸ್ಥಾವರ ಪ್ರಾರಂಭವಾದ ಸಮಯದಿಂದ ಅದರ ಕಾರ್ಯವೈಖರಿಯ ಬಗ್ಗೆ ವಿಜಿಲೆನ್ಸ್ ವಿಚಾರಣೆಯನ್ನು ಸಹ ನಡೆಸಲಾಗುವುದು ಎಂದರು.

ಮಾರ್ಚ್ 2ರಂದು ಸ್ಥಾವರದಲ್ಲಿನ ಕಸದ ರಾಶಿಗೆ ಬೆಂಕಿ ಬಿದ್ದಿದ್ದು, ಬ್ರಹ್ಮಪುರಂ ಬೆಂಕಿಯಿಂದಾಗಿ ನಿವಾಸಿಗಳಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಿಲ್ಲ. ಮುಖ್ಯಮಂತ್ರಿಯವರ ಪ್ರತಿಕ್ರಿಯೆಯನ್ನು ಕೇರಳ ಅಸೆಂಬ್ಲಿಯಲ್ಲಿ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 300 ರ ಅಡಿಯಲ್ಲಿ ಓದಲಾಯಿತು.

ರಾಜ್ಯ ಸರ್ಕಾರ, ಜಿಲ್ಲಾಡಳಿತ ಮತ್ತು ಕೊಚ್ಚಿ ಕಾರ್ಪೊರೇಷನ್ ಬೆಂಕಿಯನ್ನು ನಿಯಂತ್ರಿಸಲು ಯುದ್ಧದಂತೆ ಕೆಲಸ ಮಾಡಿದೆ ಎಂದು ಸಿಎಂ ವಿಧಾನಸಭೆಗೆ ತಿಳಿಸಿದರು. ಬ್ರಹ್ಮಪುರಂ ತ್ಯಾಜ್ಯ ಘಟಕದಲ್ಲಿ ಸಂಭವಿಸಿದ ಅಗ್ನಿ ದುರಂತದ ಬಗ್ಗೆ ಸಮಗ್ರ ಅಫಿಡವಿಟ್ ಸಲ್ಲಿಸುವಂತೆ ಕೇರಳ ಹೈಕೋರ್ಟ್ ಎರ್ನಾಕುಲಂ ಜಿಲ್ಲಾಧಿಕಾರಿಗೆ ಸೂಚಿಸಿದೆ.

ಮುಖ್ಯಮಂತ್ರಿಯವರ ಪ್ರತಿಕ್ರಿಯೆಗೆ ಮುನ್ನವೇ ಪ್ರತಿಪಕ್ಷಗಳ ನಾಯಕರು ವಿಧಾನಸಭೆಯಿಂದ ವಾಕ್‌ಔಟ್ ಮಾಡಿದರು. ಸ್ಪೀಕರ್ ಪ್ರತಿಪಕ್ಷಗಳ ಹಕ್ಕುಗಳನ್ನು ರಕ್ಷಿಸುತ್ತಿಲ್ಲ ಎಂದು ಆರೋಪಿಸಿ ಯುಡಿಎಫ್ ಶಾಸಕರು ಸ್ಪೀಕರ್ ಕಚೇರಿ ಎದುರು ವಾಗ್ವಾದ ನಡೆಸಿದರು.
ಮಹಿಳಾ ಸುರಕ್ಷತೆ ಕುರಿತಾದ ಮುಂದೂಡಿಕೆ ಮಂಡನೆಗೆ ಸಭಾಧ್ಯಕ್ಷರು ನಿರಾಕರಿಸಿದ ಹಿನ್ನೆಲೆಯಲ್ಲಿ ಬ್ಯಾನರ್ ಪ್ರದರ್ಶಿಸಿ, ಘೋಷಣೆಗಳನ್ನು ಕೂಗಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!