ಹೊಸದಿಗಂತ ವರದಿ, ಸೋಮವಾರಪೇಟೆ
ರಾಜ್ಯದ ವಿವಿಧೆಡೆ ಸುದ್ದಿಯಾದ ಹಲಾಲ್-ಜಟ್ಕಾ ಕಟ್ ಇದೀಗ ಕೊಡಗು ಜಿಲ್ಲೆಯಲ್ಲೂ ಸದ್ದು ಮಾಡುತ್ತಿದೆ.
ಜಿಲ್ಲೆಯ ಸೋಮವಾರಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಜಟ್ಕಾ ಕಟ್ ಕುರಿ ಮಾಂಸ ಮಾರಾಟ ಮಾಡಲಾಗುತ್ತಿದೆ.
ಯುಗಾದಿ ಹಬ್ಬದ ಹೊಸತೊಡಕು ಹಿನ್ನೆಲೆಯಲ್ಲಿ ಶನಿವಾರದಿಂದ ಮಾಂಸ ಮಾರಾಟ ಆರಂಭಿಸಲಾಗಿದ್ದು, ಮೂರು ದಿನಗಳ ಕಾಲ ಜಟ್ಕಾ ಕಟ್ ಕುರಿ ಮಾಂಸವನ್ನು ಮಾರಾಟ ಮಾಡಲಾಗುತ್ತಿದೆ.
ಇದರೊಂದಿಗೆ ದರ ಸಮರವೂ ಆರಂಭವಾಗಿದ್ದು, ಹಲಾಲ್ ಕಟ್ ಮಾಂಸವನ್ನು ಕೆ.ಜಿ.ಗೆ 600 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದ್ದರೆ, ಜಟ್ಕಾ ಕಟ್ ಮಾಂಸವನ್ಮು 500 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಪರಿಣಾಮವಾಗಿ ಜಟ್ಕಾ ಕಟ್ ಮಾಂಸ ಖರೀದಿಗೆ ಮಾಂಸ ಪ್ರಿಯರು ಮುಗಿಬೀಳುತ್ತಿದ್ದಾರೆ.
ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಸುಭಾಷ್ ತಿಮ್ಮಯ್ಯ, ಜಿಲ್ಲಾ ಬಿ.ಜೆ.ಪಿ.ಯುವ ಮೋರ್ಚಾ ಅಧ್ಯಕ್ಷ ದರ್ಶನ್, ಹಿ.ಜಾ.ವೇ. ತಾಲೂಕು ಮಾಜಿ ಅಧ್ಯಕ್ಷ ಉಮೇಶ್ ಮುಂತಾದವರ ನೇತೃತ್ವದಲ್ಲಿ ಮಾಂಸ ಮಾರಾಟ ನಡೆಸಲಾಗುತ್ತಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ