ಭಾರತದ ಅರ್ಧದಷ್ಟು ಉದ್ಯೋಗಿಗಳಿಗೆ ತಮ್ಮ ಕೆಲಸದಲ್ಲಿ ಬೇಸರ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕೋವಿಡ್‌ ಸಾಂಕ್ರಾಮಿಕವು ಜನರು ಕೆಲಸ ಮಾಡುವ ವಿಧಾನವನ್ನು ಮಾತ್ರ ಬದಲಾಯಿಸಿಲ್ಲ, ಆದರೆ ಅವರು ತಮ್ಮ ವೃತ್ತಿಜೀವನವನ್ನು ಹೇಗೆ ಪರಿವರ್ತಿಸಬೇಕು, ಹೇಗೆ ಬದಲಾವಣೆ ಮಾಡಿಕೊಳ್ಳಬೇಕು ಎಂದು ಮರುಪರಿಶೀಲಿಸುವಂತೆ ಮಾಡಿದೆ. ಅನೇಕರು ಕೋವಿಡ್‌ ಸಾಂಕ್ರಾಮಿಕದ ನಂತರ ತಮ್ಮ ವೃತ್ತಿ ಬದಲಾಯಿಸಿದವರಿದ್ದಾರೆ. ಆದರೆ ಭಾರತದಲ್ಲಿರುವ ಉದ್ಯೋಗಿಗಳಲ್ಲಿ ಅರ್ಧದಷ್ಟು ಮಂದಿಗೆ ತಮ್ಮ ಉದ್ಯೋಗದಲ್ಲಿ ಸಂತಸವಿಲ್ಲ ಎಂಬುದು ನಿಮಗೆ ತಿಳಿದಿದೆಯೇ ?

ಹೌದು, ಈ ಕುರಿತು ಉದ್ಯೋಗ ಹುಡುಕಾಟ ಎಂಜಿನ್ ಇಂಡೀಡ್ ಇಂಡಿಯಾದ ಅಕ್ಟೋಬರ್‌ ಮತ್ತು ಡಿಸೆಂಬರ್‌ ನಡುವಿನ ತ್ರೈಮಾಸಿಕ ನೇಮಕಾತಿ ಟ್ರ್ಯಾಕರ್ ವರದಿಯು ಈ ಅಂಶವನ್ನು ಬಹಿರಂಗಪಡಿಸಿದೆ. ಎಲ್ಲಾ ಉದ್ಯೋಗಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನರಿಗೆ (57%) ತಮ್ಮ ಪ್ರಸ್ತುತ ಉದ್ಯೋಗಗಳ ಬಗ್ಗೆ ಉತ್ಸಾಹವಿಲ್ಲ ಅಥವಾ ಬೇಸರಗೊಂಡಿದ್ದಾರೆ. ವಾಸ್ತವವಾಗಿ, 50% ಉದ್ಯೋಗಿಗಳು ಹೊಸ ಅವಕಾಶಗಳಿಗಾಗಿ ತಮ್ಮ ಕೌಶಲ್ಯತೆಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಕೆಲವರು ಮರುಕೌಶಲ್ಯ-ಕುಶಲತೆಗಾಗಿ ತಯಾರಿ ನಡೆಸುತ್ತಿದ್ದಾರೆ.

ಈಗಿನ ಉದ್ಯೋಗಿಗಳಿಗೆ ಮಾನಸಿಕ ಆರೋಗ್ಯವು ಹೆಚ್ಚು ಮುಖ್ಯವಾಗಿದೆ. ಹೊಸ ಉದ್ಯೋಗಗಳನ್ನು ಹುಡುಕುತ್ತಿರುವವರಲ್ಲಿ ಸುಮಾರು 28% ರಷ್ಟು ಜನರು ಸಂತೋಷ ಮತ್ತು ನೆಮ್ಮದಿಗೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ ಮತ್ತು 19% ರಷ್ಟು ಉತ್ತಮ ಕೆಲಸದ ಜೀವನ ಸಮತೋಲನವು ಆದ್ಯತೆಯಾಗಿದೆ ಎಂದಿದ್ದಾರೆ.

“ಶಾಂತವಾಗಿ ತೊರೆಯುವಂತಹ ಪ್ರವೃತ್ತಿಗಳಿಂದ ಹಿಡಿದು ಮೂನ್‌ಲೈಟಿಂಗ್(ಬೆಳದಿಂಗಳ ಉದ್ಯೋಗ) ಪ್ರಾಮುಖ್ಯತೆಯನ್ನು ಪಡೆಯುವವರೆಗೆ 2022 ನೇ ವರ್ಷವು ಕಾರ್ಯಸ್ಥಳದಲ್ಲಿನ ವಿವಿಧ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಆದರೆ 2023ರಲ್ಲಿ, ಉದ್ಯೋಗ ಜಗತ್ತಿನಲ್ಲಿ ಸಂಭವಿಸುವ ವಿವಿಧ ಏರಿಳಿತಗಳ ನಡುವೆ ಉದ್ಯೋಗಿಗಳು ಮಾನಸಿಕ ಯೋಗಕ್ಷೇಮ ಮತ್ತು ಕೆಲಸದ ಜೀವನದ ಸಮತೋಲನಕ್ಕೆ ಆದ್ಯತೆ ನೀಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ, ”ಎಂದು ಇಂಡೀಡ್ ಇಂಡಿಯಾದ ಮಾರಾಟದ ಮುಖ್ಯಸ್ಥ ಶಶಿ ಕುಮಾರ್ ಹೇಳಿದರು.
ವರದಿಯ ಪ್ರಕಾರ, ನಡೆಯುತ್ತಿರುವ ವಜಾಗಳು ಉದ್ಯೋಗಿಗಳ ಮೇಲೆ ದುರ್ಬಲ ಪರಿಣಾಮವನ್ನು ಬೀರಿವೆ, ಅವರಲ್ಲಿ 65% ರಷ್ಟು ಜನರು ತಮ್ಮ ಉದ್ಯೋಗಗಳಲ್ಲಿ ಹೆಚ್ಚುವರಿ ಮುಂದುವರೆಯುವುದು ಇಷ್ಟವಿಲ್ಲ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!