VIRAL | ಬಿರಿಯಾನಿ ಒಳಗಡೆ ಅರ್ಧ ಸೇದಿದ ಸಿಗರೇಟ್‌ ಪತ್ತೆ, ಕಸ್ಟಮರ್‌ ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬಿರಿಯಾನಿಯಲ್ಲಿ ಅರ್ಧದಷ್ಟು ಸೇದಿದ್ದ ಸಿಗರೇಟ್​​ ಪತ್ತೆಯಾಗಿರುವ ಘಟನೆ ತೆಲಂಗಾಣದ ಹೈದರಾಬಾದ್‌ನ ಪ್ರಸಿದ್ಧ ರೆಸ್ಟೊರೆಂಟ್​​ ಒಂದರಲ್ಲಿ ನಡೆದಿದೆ.

ಸದ್ಯ ತಮಗಾದ ಅನುಭವವನ್ನು ಗ್ರಾಹಕರು ವಿಡಿಯೋ ಮಾಡಿ ಸೋಶಿಯಲ್​​ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದಾರೆ. ರೆಸ್ಟೋರೆಂಟ್​​ನ ಬೇಜಾವಬ್ದಾರಿಗೆ ನೆಟ್ಟಿಗರು ಕಾಮೆಂಟ್​​ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನಪ್ರಿಯ ಬಾವರ್ಚಿ ರೆಸ್ಟೋರೆಂಟ್‌ನಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಸುಮಾರು 8-10 ಯುವಕರು ರೆಸ್ಟೋರೆಂಟ್‌ನಲ್ಲಿ ತಮ್ಮ ಆಹಾರವನ್ನು ತಿನ್ನುತ್ತಿರುವುದನ್ನು ವೀಡಿಯೊದಲ್ಲಿ ನೋಡಬಹುದು ಮತ್ತು ಅವರಲ್ಲಿ ಒಬ್ಬನ ಪ್ಲೇಟ್‌ನಲ್ಲಿ ಸಿಗರೇಟ್ ತುಂಡು ಕಂಡುಬಂದಿದೆ.

ಈ ಘಟನೆಗೆ ರೆಸ್ಟೊರೆಂಟ್‌ನ ಆಡಳಿತ ಮಂಡಳಿ ಗ್ರಾಹಕರಲ್ಲಿ ಕ್ಷಮೆ ಯಾಚಿಸುತ್ತಿರುವುದು ಕಂಡುಬಂದಿದೆ. ಬಿರಿಯಾನಿಯಲ್ಲಿ ಸಿಗರೇಟ್ ತುಂಡು ನೋಡಿ ರೆಸ್ಟೋರೆಂಟ್‌ನಲ್ಲಿದ್ದ ಇತರ ಜನರು ಸಹ ಆಘಾತಕ್ಕೊಳಗಾಗಿದ್ದಾರೆ. ಘಟನೆಯ ನಿಖರವಾದ ದಿನಾಂಕ ಮತ್ತು ಸಮಯ ಇನ್ನೂ ತಿಳಿದಿಲ್ಲ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!