ಲಂಚ ಪಡೆಯುವಾಗ ಸಿಕ್ಕಿಬಿದ್ದ ಹಳಿಯಾಳದ ಗ್ರಾಮ ಲೆಕ್ಕಾಧಿಕಾರಿಗೆ ನ್ಯಾಯಾಂಗ ಬಂಧನ

ಹೊಸದಿಗಂತ ವರದಿ,ಮುಂಡಗೋಡ:

ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಾಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ನಡೆದಿದೆ.

ಕಂದಾಯ ಇಲಾಖೆಯ ಇಂದೂರ ಗ್ರಾಮದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವಬ ಗಿರೀಶ ರಣದೇವ ಎಂಬುವರನ್ನು ಬಂಧಿಸಲಾಗಿದೆ.

೨೦೧೯ರಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ಗ್ರಾಮಲೆಕ್ಕಾಧಿಕಾರಿ ಗಿರೀಶ ರಣದೇವ ಎಂಬಾತನ ಮೇಲಿನ ಪ್ರಕರಣ ನ್ಯಾಯಾಲಯದಲ್ಲಿ ದೃಢಪಟ್ಟಿದ್ದರಿಂದ, ಇದೇ ತಿಂಗಳು ೨೧ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗುವುದರಿಂದ ಲೋಕಾಯುಕ್ತ ಪೊಲೀಸರು ಈತನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

೨೦೧೯ರಲ್ಲಿ ಹಳಿಯಾಳದ ಕಂದಾಯ ಇಲಾಖೆಯ ತತ್ವಣಗಿ ಗ್ರಾಮಲೆಕ್ಕಾಧಿಕಾರಿಯಾಗಿದ್ದ ಗಿರೀಶ ರಣದೇವ ಅದೇ ಗ್ರಾಮದ ಭೀಮರಾವ ಕುರುಬರ ತನ್ನ ತಂದೆಯ ಮರಣ ಹೊಂದಿದ ನಂತರ ೧೭ ಎಕರೆ ಜಮೀನನ್ನು ತನ್ನ ಹಾಗೂ ಸಹೋದರನಿಗೆ ಭಾಗವಾಗಿ ಸಬ್‌ರೆಜಿಸ್ಟರ್‌ನಲ್ಲಿ ನೋಂದಾವಣೆ ಮಾಡಿಕೊಂಡಿದ್ದ. ನಂತರ ಹಳಿಯಾಳ ತಹಶೀಲ್ದಾರ ಕಚೇರಿಗೆ ಖಾತೆ ಬದಲಾವಣೆಗೆ ಭೀಮರಾವ ಹಾಕಿದ್ದ ಅರ್ಜಿಯು ಗ್ರಾಮಲೆಕ್ಕಿಗ ಗಿರೀಶ ರಣದೇವ ಎಂಬುವರ ಬಳಿ ಬಂದಿತ್ತು. ಇದಕ್ಕೆ ಗ್ರಾಮ ಲೆಕ್ಕಿಗ ಗಿರೀಶ ಮೂರು ಸಾವಿರ ರೂಪಾಯಿ ಲಂಚ ಕೇಳಿದ್ದ. ಆ ವೇಳೆಯಲ್ಲಿ ಭೀಮರಾವ ಲೋಕಾಯುಕ್ತರಲ್ಲಿ ದೂರು ನೀಡಿದ್ದರಿಂದ, ಗ್ರಾಮ ಲೆಕ್ಕಿಗ ಗಿರೀಶ ಹಣ ಪಡೆಯುತ್ತಿರುವಾಗ ಲೋಕಾಯುಕ್ತ ದಾಳಿ ನಡೆದು ಸಿಕ್ಕಿಬಿದ್ದಿದ್ದ.

ಕಳೆದ ನಾಲ್ಕದು ವರ್ಷಗಳಿಂದ ಲೋಕಾಯುಕ್ತ ನ್ಯಾಯಾಲಯದಲ್ಲಿ ಈ ಬಗ್ಗೆ ವಿಚಾರಣೆ ನಡೆದಿತ್ತು. ನವಂಬರ್ ೧೫ ರಂದು ನ್ಯಾಯಾಲಯದಲ್ಲಿ ಅಂತಿಮ ತೀರ್ಪು ಪ್ರಕಟವಾಗಿದ್ದು, ಅದರಲ್ಲಿ ಗ್ರಾಮ ಲೆಕ್ಕಿಗ ಗಿರೀಶ ರಣದೇವ ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ನವಂಬರ್ ೨೧ರಂದು ಪ್ರಕಟವಾಗುವ ಹಿನ್ನೆಲೆಯಲ್ಲಿ, ಲೋಕಾಯುಕ್ತ ಪೊಲೀಸರು ಗ್ರಾಮ ಲೆಕ್ಕಿಗ ಗಿರೀಶ ರಣದೇವ ಅವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!