ಹಾಸನದಲ್ಲಿ ಕೈ ಅಭ್ಯರ್ಥಿ ನಾಮಪತ್ರ ಸಲ್ಲಿಕೆ: ಡಿಸಿಎಂ ಬೃಹತ್‌ ಮೆರವಣಿಗೆ

ಹೊಸದಿಗಂತ ವರದಿ ಹಾಸನ :

ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶ್ರೇಯಸ್ ಪಟೇಲ್‌ ಇಂದು ಸೋಮವಾರ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಾಮಪತ್ರ ಸಲ್ಲಕೆ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಆಗಮಿಸಲಿದ್ದು, ನಗರದಲ್ಲಿ ಬೃಹತ್ ಮೆರವಣಿ ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ಅಭ್ಯರ್ಥಿಯ ಮೆರವಣಿಗೆ ನಡೆಯಲಿದ್ದು, ಈಗಾಗಲೇ ನಗರಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಕಾರ್ಯಕರ್ತರು ಆಗಮಿಸಿ ಮೆರವಣಿಗೆಗಾಗಿ ಕಾದುಕುಳಿತಿದ್ದಾರೆ. ಸುಮಾರು 30 ಸಾವಿರ ಕಾಂಗ್ರೇಸ್ ಕಾರ್ಯಕರ್ತರು ಮತ್ತು ಸಾರ್ವಜನಿಕರು ಸೇರುವ ನಿರೀಕ್ಷೆ ಇದೆ ಎನ್ನಲಾಗಿದೆ. ಈ ಕಾರ್ಯಕ್ರಮ ನಡೆಯುವ ಸಮಯದಲ್ಲಿ ಹಾಸನ ನಗರ ಒಳಭಾಗದಲ್ಲಿ ಸಂಚಾರಿಸುವ ವಾಹನಗಳ 12 ಗಂಟೆಯಿಂದ ಸಂಜೆ:4 ಗಂಟೆಯವರೆಗೆ ವಾಹನ ಸವಾರರು ಬದಲಿ ಮಾರ್ಗದಲ್ಲಿ ಸಂಚರಿಸಲು ಹಾಸನ ಪೊಲೀಸ್ ಅಧೀಕ್ಷಕರು ಪ್ರಕಟಣೆ ಹೊರಡಿಸಿದ್ದಾರೆ.

1. ಅರಸೀಕೆರೆಯಿಂದ ಬರುವ ವಾಹನಗಳು ಬೂವನಹಳ್ಳಿ ಮೂಲಕ ಬೈಪಾಸ್ ಸೇರಬೇಕು

2. ಸಕಲೇಶಮರ-ಆಲೂರು ಮತ್ತು ಬೇಲೂರು ಕಡೆಯಿಂದ ಬರುವ ವಾಹನಗಳು ಸಾಯಣ್ಣ ವೃತ್ತದ (ಸಂತೇಪೇಟೆ ವೃತ್ತ) ಮೂಲಕ ಬಿಟ್ಟಗೌಡನಹಳ್ಳಿ ಸರ್ಕಲ್ ಮಾರ್ಗವಾಗಿ ಚನ್ನಪಟ್ಟಣ ಸರ್ಕಲ್ ಕಡೆಗೆ ಹಾದು ಹೋಗುವುದು,

3. ಬೆಂಗಳೂರು ಕಡೆಯಿಂದ ಬರುವ ವಾಹನಗಳು ಬಿ.ಎಂ ಬೈಪಾಸ್ ರಸ್ತೆ ಮೂಲಕ ಚನ್ನಪಟ್ಟಣ ಸರ್ಕಲ್ ಮಾರ್ಗವಾಗಿ ಹಾದು ಹೋಗುವುದು.

4. ಡೈರಿ ಸರ್ಕಲ್ ಕಡೆಯಿಂದ ಎನ್.ಆರ್ ಸರ್ಕಲ್ ಕಡೆಗೆ ಬಿ.ಎಂ ರಸ್ತೆಯ ಎಡಬದಿಯಲ್ಲಿ ಮರವಣಿಗೆ ಸಾಗುವುದರಿಂದ, ಎನ್.ಆರ್ ಸರ್ಕಲ್ ಕಡೆಯಿಂದ ಡೈರಿ ಸರ್ಕಲ್ ಕಡೆಗೆ ಸಾಗುವ ಏಖಮುಖ ರಸ್ತೆ ಮಾರ್ಗವನ್ನು ದ್ವಿಮುಖ ರಸ್ತೆ ಮಾರ್ಗವಾಗಿ ಹಾದು ಹೋಗುವುದು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗ ಹಾಲಿ ಸಂಸದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ವಿರುದ್ಧ ಕಾಂಗ್ರೇಸ್ ಅಭ್ಯರ್ಥಿಯಾಗಿ ಶ್ರೇಯಸ್ ಪಟೇಲ್ ಅಖಾಡಕ್ಕಿಳಿದ್ದಾರೆ. ಶ್ರೇಯಸ್ ಪಟೇಲ್ ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರನ್ನ ಮಣಿಸಿದ್ದ ಮಾಜಿ ಸಂಸದ ದಿವಂಗತ ಜಿ.ಪುಟ್ಟಸ್ವಾಮಿಗೌಡರ ಮೊಮ್ಮಗ. ನಾಮಪತ್ರ ಸಲ್ಲಿಕೆ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಶಾಸಕರುಗಳಾದ ಕೆ.ಎಂ.ಶಿವಲಿಂಗೇಗೌಡ, ಕಡೂರು ಶಾಸಕ ಆನಂದ್ ಉಪಸ್ಥಿತಿಯಲ್ಲಿ ಬೃಹತ್ ಮೆರವಣಿಗೆ ಮೂಲಕ ಡಿಸಿ ಕಛೇರಿಗೆ ಶ್ರೇಯಸ್ ಪಟೇಲ್ ಆಗಮಿಸಿ ನಾಮಪತ್ರ ಸಲ್ಲಿಸಲಿದ್ದಾರೆ.

ಹಾಸನದ ಡೈರಿ ಸರ್ಕಲ್‌ನಿಂದ ಕಾಂಗ್ರೆಸ್ ಕಛೇರಿವರೆಗೆ ಬೃಹತ್ ಮೆರವಣಿಗೆ, ನಾಮಪತ್ರ ಸಲ್ಲಿಸಿದ ಬಳಿಕ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಅಭ್ಯರ್ಥಿ ಶ್ರೇಯಸ್ ಪಟೇಲ್ ಮಾತನಾಡಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!