ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಮಾನದಲ್ಲಿ ಪ್ರಯಾಣ ಮಾಡುವವರಿಗೆ ವಿಮಾನ ಇಳಿದು ಗಂಟೆಗಳೇ ಕಳೆದರು ನಿಮ್ಮ ಲಗೇಜ್ ನಿಮ್ಮ ಕೈ ಸೇರುವುದಿಲ್ಲ, ಇದರಿಂದ ಬೇಗ ಹೋಗಬೇಕೆಂದು ವಿಮಾನದಲ್ಲಿ ಹೋದರೂ ನಿಮ್ಮ ಪ್ರಯಾಣ ತೀರಾ ವಿಳಂಬವಾಗುತ್ತದೆ. ಹೀಗಾಗಿ ನಾಗರಿಕ ವಿಮಾನಯಾನ ಭದ್ರತಾ ವಿಭಾಗ ಪ್ರಯಾಣಿಕರುವ ವಿಮಾನ ಇಳಿದ ಅರ್ಧಗಂಟೆಯೊಳಗೆ ವಿಮಾನ ಪ್ರಯಾಣಿಕರಿಗೆ ಅವರ ಲಗೇಜುಗಳನ್ನು ಹಸ್ತಾಂತರಿಸಬೇಕು ಎಂದು ಸೂಚಿಸಿದೆ.
ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯೂರಿಟಿ ವಿಭಾಗವೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕೃತ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಅದರಂತೆ, ಪ್ರಯಾಣಿಕರಿಗೆ ಸಮಯಕ್ಕೆ ಸರಿಯಾಗಿ ಅವರ ಲಗೇಜುಗಳನ್ನು ವಿತರಿಸುವುದು ಅಗತ್ಯವಾಗಿದೆ. ಸಮಯಕ್ಕೆ ಸರಿಯಾಗಿ ಪ್ರಯಾಣಿಕರಿಗೆ ಅವರ ಲಗೇಜುಗಳನ್ನು ಹಸ್ತಾಂತರಿಸುವುದಕ್ಕಾಗಿ ಫೆಬ್ರವರಿ 26 ರೊಳಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ವಿಮಾನಯಾನ ಸಂಸ್ಥೆಗಳಿಗೆ ಬಿಸಿಎಎಸ್ ಒತ್ತಾಯಿಸಿದೆ.
ಈ ನಿರ್ದೇಶನವೂ ವಿಶೇಷವಾಗಿ 7 ಪ್ರಮುಖ ಏರ್‌ಲೈನ್ಸ್‌ಗಳಾದ ಏರ್ ಇಂಡಿಯಾ, ಇಂಡಿಗೋ, ಆಕಾಸ ಏರ್, ಸ್ಪೈಸ್ ಜೆಟ್, ವಿಸ್ತಾರ, ಎಐಎಕ್ಸ್ ಕನೆಕ್ಟ್ ಹಾಗೂ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗೆ ಅಗತ್ಯವಾಗಿ ಅನ್ವಯವಾಗುತ್ತದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಜನವರಿಯಲ್ಲಿ ಬಿಸಿಎಎಸ್ ನಿರಂತರ ಮೇಲ್ವಿಚಾರಣೆ ಆರಂಭಿಸಿತ್ತು. ಈ ಪ್ರಕ್ರಿಯೆಯ ಆರಂಭದಿಂದಲೂ ಎಲ್ಲಾ ವಿಮಾನಯಾನ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ವಾರಕ್ಕೊಮ್ಮೆ ಮೇಲ್ವಿಚಾರಣೆ ಮಾಡಲಾಗುತ್ತಿತ್ತು. ಕೆಲವು ಏರ್‌ಲೈನ್ಸ್‌ಗಳ ಸೇವೆಯಲ್ಲಿ ಸುಧಾರಣೆಯಾಗಿದ್ದರೂ ಸಹ ಅದು ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ವಿಮಾನದ ಎಂಜಿನ್ ಆಫ್ ಆದ 10 ನಿಮಿಷಗಳಲ್ಲಿ ಲಗೇಜ್‌ನ ಮೊದಲ ಭಾಗವೂ ಬ್ಯಾಗೇಜ್ ಬೆಲ್ಟ್‌ಗೆ ತಲುಪಬೇಕು ಹಾಗೂ ಕೊನೆಯ ಬ್ಯಾಗ್ 30 ನಿಮಿಷಗಳ ಒಳಗೆ ತಲುಪಬೇಕು ಎಂದು ಈಗ ಹೊಸ ಆದೇಶ ನೀಡಲಾಗಿದೆ.