ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುಗಾದಿ ಬಳಿಕ ರಾಜ್ಯದಲ್ಲಿ ಒಳ್ಳೆ ಬೆಳೆ ಮತ್ತು ಮಳೆಯಾಗುವ ಲಕ್ಷಣಗಳಿವೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (kodimath dr sivananda shivayogi rajendra swamiji) ಭವಿಷ್ಯ ನುಡಿದಿದ್ದಾರೆ.
ಕೋಲಾರದ ಜಿಲ್ಲೆ ಮಾಲೂರು ಪಟ್ಟಣದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಕೋಡಿ ಮಠದ ಡಾ.ಶಿವನಂದ ಶಿವಯೋಗಿ ಸ್ವಾಮೀಜಿ, ಯುಗಾದಿ ಕಳೆದ ನಂತರ ರಾಜ್ಯದಲ್ಲಿ ಒಳ್ಳೆ ಬೆಳೆ ಮತ್ತು ಮಳೆಯಾಗುವ ಲಕ್ಷಣಗಳಿವೆ ಎಂದು ಭವಿಷ್ಯ ನುಡಿದರು. ಇನ್ನು ಇದೇ ವೇಳೆ ರಾಜ್ಯ ರಾಜಕೀಯ ಬಗ್ಗೆ ಯುಗಾದಿ ಕಳೆದ ನಂತರ ಹೇಳುವೆ, ಇನ್ನ ಸಾಕಷ್ಟು ಸಮಯವಿದೆ ಎಂದರು.
ಇದರ ಜೊತೆಗೆ ಮತಾಂಧoತೆ ಹೆಚ್ಚಾಗುತ್ತದೆ, ಬಾಂಬ್ ಸ್ಫೋಟ, ಭೂಕಂಪ ಆಗುತ್ತೆ. ಧಾರ್ಮಿಕ ಮುಖಂಡನ ಜೀವಕ್ಕೆ ಅಪಾಯವಿದೆ ಎಂದು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ.
ಗ್ಯಾರಂಟಿಗಳಿಂದ ಸರ್ಕಾರ ನಡೆಯುತ್ತಿದ್ದೀಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ನನ್ನಗಿಂತ ನಿಮಗೆ ಚೆನ್ನಾಗಿ ಗೊತ್ತು. ರಾಷ್ಟ್ರ ರಾಜಕಾರಣ ಸಹ ಯುಗಾದಿ ಮೇಲೆ ಗೊತ್ತಾಗುತ್ತದೆ. ಯುಗಾದಿ ನಂತರ ಭವಿಷ್ಯ ಬರುವುದು. ಒಂದು ತಿಂಗಳು ಕಳೆದ ಮೇಲೆ ಮಳೆ, ಬೇಳೆ, ರಾಜಕೀಯ, ದುಡಿಮೆ, ವ್ಯಾಪಾರ ಎಲ್ಲಾ ಗೊತ್ತಾಗಲಿದೆ ಎಂದು ಹೇಳಿದರು.
ಜಾಗತಿಕ ಮಟ್ಟದಲ್ಲಿ ತೊಂದರೆ ಇದೆ. ಬೆಂಕಿ ಹಾವಳಿ,ನೀರಿನ ಹಾವಳಿ, ಯುದ್ದ ಆಗುತ್ತೆ. ಅನೇಕ ಸಾವು ನೋವುಗಳು ಆಗುತ್ತೆ. ಮತಾದಂತೆ ಹೆಚ್ಚಾಗುತ್ತದೆ. ಬಾಂಬ್ ಸ್ಫೋಟ, ಭೂಕಂಪ ಆಗಲಿದೆಎಂದು ಸ್ಫೋಟಕ ಭವಿಷ್ಯ ನುಡಿದರು.