ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಸಮಂತಾ ತಮ್ಮ ಶಾಕುಂತಲಂ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದರು.
ಸಾಕಷ್ಟು ತೊಂದರೆ, ನೋವುಗಳ ಮಧ್ಯೆಯೂ ಸಮಂತಾ ಶಾಕುಂತಲಂಗಾಗಿ ಪ್ರಚಾರ ಮಾಡುತ್ತಿದ್ದರು.
ಮೊದಲ ದಿನ ಶಾಕುಂತಲಂ ಸಿನಿಮಾ ಐದು ಕೋಟಿ ರೂಪಾಯಿ ಸಾಧಾರಣ ಮೊತ್ತ ಸಂಪಾದಿಸಿತ್ತು. ಶುಕ್ರವಾರ ಸಿನಿಮಾ ರಿಲೀಸ್ ಆಗಿದ್ದು, ವೀಕೆಂಡ್ಗಾಗಿ ನಿರ್ಮಾಪಕರು ಎದುರು ನೋಡುತ್ತಿದ್ದರು. ವೀಕೆಂಡ್ನಲ್ಲಿ ಕೋಟಿ ಕೋಟಿ ಬಾಚುವ ನಿರೀಕ್ಷೆಯಲ್ಲಿದ್ದ ನಿರ್ಮಾಪಕರಿಗೆ ಭಾರೀ ನಿರಾಸೆಯಾಗಿದೆ.
ವೀಕೆಂಡ್ನಲ್ಲಿ ಸಿನಿಮಾ ಕಲೆಕ್ಷನ್ ಮಾಡಿದ್ದು ಬರೀ 1.5 ಕೋಟಿ ರೂಪಾಯಿಗಳಾಗಿದೆ. ಸಿನಿಮಾ ಮೇಕಿಂಗ್ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದ್ದರೂ, ಪೌರಾಣಿಕ, ಗೊತ್ತಿರುವ ಕಥೆಯನ್ನು ನೋಡೋದಕ್ಕೆ ಜನ ಇಷ್ಟಪಟ್ಟಿಲ್ಲ ಎನಿಸುತ್ತದೆ!