ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹನುಮ ಜಯಂತಿ ‘ಶೋಭಾ ಯಾತ್ರೆ’ ವೇಳೆಪೊಲೀಸರ ಮೇಲೆ ಗುಂಡು ಹಾರಿಸಿದ ಆರೋಪಿ ಮೊಹಮ್ಮದ್ ಸೋನು ಚಿಕ್ನಾನನ್ನು ಬಂಧಿಸಲು ಹೋದ ಪೋಲೀಸ್ ತಂಡದ ಮೇಲೆ ಆರೋಪಿಯ ಕುಟುಂಬ ಸದಸ್ಯರು ಕಲ್ಲಿನ ಮೂಲಕ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಜಹಾಂಗೀರ್ಪುರಿಯ ಆರೋಪಿ ಸೋನು ಮನೆಗೆ ಭೇಟಿ ನೀಡುತ್ತಿದ್ದ ಪೊಲೀಸ್ ತಂಡದ ಮೇಲೆ ಇತರ ಕುಟುಂಬ ಸದಸ್ಯರು ಕಲ್ಲು ಎಸೆದಿದ್ದಾರೆ. ಕಲ್ಲು ತೂರಾಟದ ಹೊರತಾಗಿಯೂ, ಪೊಲೀಸರು ಆರೋಪಿಯ ಪತ್ನಿಯನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
Breaking : Stones pelted at Delhi Police team that went to arrest the shooter of #Jahangirpuri Sonu Chikna. pic.twitter.com/ur9NCNp60Y
— Ashish (@aashishNRP) April 18, 2022