ಹನುಮಾನ್ ಚಾಲೀಸಾ ವಿರುದ್ಧ ಶಿವಸೇನೆಯ ಸಮರ!

 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾಳಾಠಾಕ್ರೆಯವರ ವಿಚಾರಧಾರೆಯಅಡಿಯಲ್ಲಿ ತಲೆ ಎತ್ತಿದ್ದ ಶಿವಸೇನೆ ಈಗ ಅವರ ವಿಚಾರಗಳನ್ನು ಮರೆತಂದಿದೆ. ಮಸೀದಿಗಳಿಂದ ಬರುತ್ತಿರುವ ಆಜಾನ್ ಶಬ್ದದ ಮಿತಿಗೆ ಮಹಾರಾಷ್ಟ್ರ ಸರ್ಕಾರ ನ್ಯಾಯಾಲಯಗಳು ನೀಡಿರುವ ಆದೇಶ ಪಾಲಿಸುತ್ತಿಲ್ಲ ಎಂಬ ಕಾರಣಕ್ಕೆ ಪ್ರತಿಕ್ರಿಯಾತ್ಮಕವಾಗಿ ಹುಟ್ಟಿಕೊಂಡಿದ್ದು ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ ಪಠಣ. ಆದರೆ, ಕ್ರಿಯೆಯ ಬಗ್ಗೆ ಏನೊಂದೂ ನಿಲುವು ತೆಗೆದುಕೊಳ್ಳದ ಅಲ್ಲಿನ ಸರ್ಕಾರ, ಪ್ರತಿಕ್ರಿಯೆ ಕೊಟ್ಟವರಿಗೆ ಮಾತ್ರ ಪೊಲೀಸ್ ಬಲವನ್ನು ಉಪಯೋಗಿಸಿ ಹತ್ತಿಕ್ಕುತ್ತಿದೆ.

 

 

ಹನುಮಾನ್‌ ಚಾಲೀಸಾ ವಿವಾದ ಮಹಾರಾಷ್ಟ್ರದಲ್ಲಿ ವಿವಾದ ಭುಗಿಲೆದ್ದ ಬೆನ್ನಲ್ಲೇ ಮಾತೋಶ್ರೀ(ಠಾಕ್ರೆ ನಿವಾಸ) ಮುಂದೆ ಹನುಮಾನ್‌ ಚಾಲೀಸಾ ಪಠಿಸುತ್ತೇವೆ ಎಂದು ಸವಾಲೆಸೆದಿದ್ದ ಸಂಸದೆ ನವನೀತ್ ರಾಣಾ ಮತ್ತವರ ಪತಿ  ವಿರುದ್ಧ ಮಹಾರಾಷ್ಟ್ರ ಸರ್ಕಾರ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಜೈಲಿಗೆ ಕಳುಹಿಸಿದೆ. ಮತ್ತು ಈ ವಿವಾದದ ಹಿಂದಿರುವ ʼಕಾರಣʼಗಳನ್ನು ಪತ್ತೆಹಚ್ಚುತ್ತೇವೆ ಎಂದು ಹೇಳಿದೆ.

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಮತ್ತುಗೃಹಸಚಿವ ದಿಲೀಪ ವಾಲ್ಸೆ ಈ ವಿಚಾರದ ಕುರಿತಾಗಿಪ್ರತಿಕ್ರಿಯೆ ನೀಡಿ ಪೋಲಿಸರು ಘಟನೆಯ ತನಿಖೆ ಮಾಡಿ ಈ ಪ್ರಕರಣದ ಬೇರುಗಳನ್ನುಹುಡುಕುತ್ತಿದ್ದಾರೆ. ಈಘಟನೆಗೆ ಮೂಲ ಕಾರಣೀಕರ್ತರಿಗೆ ಶಿಕ್ಷೆ ನೀಡುವವರೆಗೂ ನಿಲ್ಲುವುದಿಲ್ಲ. ರಾಣಾ ದಂಪತಿಗಳ ಈ ಕೃತ್ಯದ ಹಿಂದೆ ಬೇರೆಯಾವುದೋ ಕುಮ್ಮಕ್ಕು ಕೆಲಸ ಮಾಡುತ್ತಿದೆ. ರಾಣಾ ದಂಪತಿಗಳು ಪೊಲೀಸರ ಮಾತನ್ನೂ ಕೇಳದೇ ಧಿಕ್ಕರಿಸಿದ್ದಾರೆ.ಅದಕ್ಕೆ ತಕ್ಕ ಶಿಕ್ಷೆಯಾಗುತ್ತದೆ” ಎಂದು ಆರೋಪ ಮಾಡಿದ್ದಾರೆ.

ಹನುಮಾನ್ ಚಾಲೀಸಾ ಪಠಣ ದೇಶದ್ರೋಹ ಎದುರಿಸುವ ಅಪರಾಧವೇ?

ಸರಿ. ಶಿವಸೇನೆ ಕಚೇರಿ ಮುಂದೆ ಭಜನೆಯ ಪಠಣ ಕಿರಿಕಿರಿ ಉಂಟುಮಾಡುವ ಉದ್ದೇಶದ್ದಾಗಿತ್ತು ಎಂಬ ವಾದವನ್ನು ಒಂದೊಮ್ಮೆ ಒಪ್ಪಿಕೊಂಡದ್ದೇ ಆದರೂ, ಅದೇನು ದೇಶದ್ರೋಹದ ಪ್ರಕರಣವಾಗಿಬಿಡುತ್ತದೆಯೇ ಎಂಬುದು ಈಗ ಎದ್ದಿರುವ ಪ್ರಶ್ನೆ.

ಉದ್ಧವ್‌ ಠಾಕ್ರೆ ಮನೆಯಮುಂದೆ ಹನುಮಾನ್‌ ಚಾಲೀಸಾ ಹಪಠಿಸುವ ತಮ್ಮ ವಿಚಾರವನ್ನು ರಾಣಾ ದಂಪತಿಗಳು ಹಿಂತೆಗೆದುಕೊಂಡರೂ ಸಹ  ರಾಣಾ ದಂಪತಿಗಳ ಮೇಲೆ ‘ದೇಶದ್ರೋಹ’ದ ಆರೋಪ ಹೊರಿಸಿ ಬಂಧಿಸಲಾಗಿದೆ.. ಅವರನ್ನು ಬಾಂದ್ರಾ ಕೋರ್ಟ್‌ಗೆ ಹಾಜರುಪಡಿಸಿ  ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್‌153 (A) (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 353 (ಸಾರ್ವಜನಿಕ ಸೇವಕರನ್ನು ಅವರ ಕರ್ತವ್ಯದಿಂದ ತಡೆಯುವುದು), ಮತ್ತು ಮುಂಬೈ ಪೊಲೀಸ್ ಕಾಯಿದೆಯ ಸೆಕ್ಷನ್ 135 (ನಿಷೇಧ ಆದೇಶಗಳ ಉಲ್ಲಂಘನೆ),IPC ಸೆಕ್ಷನ್ 124-A (ದೇಶದ್ರೋಹ) ಮುಂತಾದ ಆರೋಪಗಳನ್ನು ಹಾಕಲಾಗಿದ್ದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರವಿ ರಾಣಾ ಅವರನ್ನು ತಲೋಜಾ ಜೈಲಿಗೆ ಮತ್ತು ಅವರ ಪತ್ನಿ ನವನೀತ್‌ ರಾಣಾರನ್ನು ಬೈಕುಲ್ಲಾ ಮಹಿಳಾ ಜೈಲಿಗೆ ಕಳುಹಿಸಲಾಗಿದೆ.

ಹೂತುಹಾಕ್ತೇವೆ ಅಂತಿದ್ದಾರೆ ಶಿವಸೇನೆಯ ಅಧಿಕಾರಸ್ಥರು

ಇದಲ್ಲದೇ ಶಿವ ಸೇನೆ ನಾಯಕ ಸಂಜಯ ರಣಾವತ್‌ “ಮಾತೋಶ್ರಿ ವಿಷಯಕ್ಕೆ ಬರುವ ಯೋಚನೆಯನ್ನೂ ಮಾಡಬೇಡಿ” ಎಂದು ಬೆದರಿಕೆ ಹಾಕಿರುವುದಲ್ಲದೇ ಅವರನ್ನು ನೆಲದಲ್ಲಿ 20 ಅಡಿ ಹೂತುಹಾಕುತ್ತೇವೆ ಎಂದು ಧಮ್ಕಿ ಹಾಕಿದ್ದಾರೆ. ಅಲ್ಲದೇ ರಾಣಾ ದಂಪತಿಗಳನ್ನು ಭೇಟಿಮಾಡಲು ಹೋದ ಬಿಜೆಪಿ ಶಾಸಕ ಕಿರೀತ್‌ ಸೋಮಯ್ಯ ಅವರ ಮೇಲೆ ಪೋಲೀಸರ ಎದುರಲ್ಲೇ ದಾಳಿ ಮಾಡಲಾಗಿದೆ. ಏಕೆಂದು ಪ್ರಶ್ನಿಸಿದಾಗ “ಸೋಮಯ್ಯ ಅವರ ನಡೆ ನ್ಯಾಯ ಸಮ್ಮತವಲ್ಲ, ರಾಣಾ ದಂಪತಿಗಳಿಗೆ ಕೇವಲ ಅವರ ವಕೀಲರನ್ನು ಭೇಟಿ ಮಾಡಲು ಮಾತ್ರಅವಕಾಶ ನೀಡಲಾಗಿದೆ” ಎಂದು ಗೂಂಡಾವರ್ತನೆ ತೋರಿದ್ದಾರೆ.

ಅಧಿಕಾರದಲ್ಲಿರುವ ಶಿವಸೇನೆ ತನ್ನ ಮೂಲ ನೆಲೆಗಟ್ಟನ್ನು ಮರೆತು ಹನುಮಾನ್‌ ಚಾಲೀಸಾ ವಿರುದ್ಧವಾಗಿ ಸಾಗುತ್ತಿದೆ. ಒಂದು ಕಾಲದಲ್ಲಿ ಭಾಳಾಠಾಕ್ರೆಯವರ ʼಹಿಂದುತ್ವʼ ದ ಆಧಾರದಲ್ಲಿಯೇ ಎದ್ದು ನಿಂತುಕೊಂಡ ಶಿವ ಸೇನೆ ಈಗ ಭಾಳಾ ಠಾಕ್ರೆಯವರ ಮೂಲ ಆಶಯಗಳನ್ನು ಗಾಳಿಗೆ ತೂರಿದೆ.  ʼಹಿಂದುತ್ವʼದ ಆಧಾರದಲ್ಲಿ ಮುನ್ನೆಲೆಗೆ ಬಂದ ಪಕ್ಷ ಹನುಮಾನ್‌ ಚಾಲೀಸಾ ವಿರುದ್ಧ ಸಮರ ಸಾರಿರುವುದು ವಿಪರ್ಯಾಸ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!