Wednesday, June 29, 2022

Latest Posts

ವಿಶ್ವದ ಅತಿ ಹೆಚ್ಚು ಮಿಲಿಟರಿ ವೆಚ್ಚದ ಪಟ್ಟಿಯಲ್ಲಿ ಭಾರತಕ್ಕೆ ಮೂರನೇ ಸ್ಥಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಶ್ವದಲ್ಲಿ ಅತಿ ಹೆಚ್ಚು ,ಮಿಲಿಟರಿ ವೆಚ್ಚ ಮಾಡುವವರ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ. ಸ್ಟಾಕ್ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್‌ ಹೊರಡಿಸಿರುವ ವರದಿಗಳ ಪ್ರಕಾರ 2021ರಲ್ಲಿ ಬಾರತದ ಮಿಲಿಟರಿ ವೆಚ್ಚವು 76.6 ಬಿಲಿಯನ್‌ ಡಾಲರ್‌ ಆಗಿದ್ದು ಇದು ಕಳೆದ ವರ್ಷಕ್ಕೆ ಹೋಲಿಸಿದರೆ 0.9% ನಷ್ಟು ಹೆಚ್ಚಾಗಿದೆ ಮತ್ತು 2012 ಕ್ಕೆ ಹೋಲಿಸಿದರೆ 33% ದಷ್ಟು ಹೆಚ್ಚಾಗಿದೆ.

ದೇಶೀಯ ರಕ್ಷಣಾ ತಯಾರಿಕೆ ಉದ್ಯಮಕ್ಕೆ ಬೆಂಬಲ ನೀಡಲು ಬಾರತವು ತನ್ನ ರಕ್ಷಣಾ ವೆಚ್ಚದಲ್ಲಿ 64% ದಷ್ಟನ್ನು ದೇಶೀಯ ಶಸ್ತ್ರಾಸ್ತ್ರ ಖರೀದಿಗೆ ಮೀಸಲಿಟ್ಟಿದೆ. ಇನ್ನು ಅಮೆರಿಕ ಮತ್ತು ಚೀನಾ ಕ್ರಮವಾಗಿ ಮೊದಲನೇ ಮತ್ತು ಎರಡನೇ ಸ್ಥಾನದಲ್ಲಿದೆ. ಅಮರಿಕದ ಮಿಲಿಟರಿ ವೆಚ್ಚವು 801 ಬಿಲಿಯನ್‌ ಡಾಲರ್‌ ಆಗಿದ್ದು ಇದು ಕಳೆದ ವರ್ಷಕ್ಕೆ ಹೋಲಿಸಿದರೆ 1.4 % ಕುಸಿತವಾಗಿದೆ. ಎರಡನೇ ಸ್ಥಾನದಲ್ಲಿರುವ ಚೀನಾದ ಮಿಲಿಟರಿ ವೆಚ್ಚು 293 ಬಿಲಿಯನ್‌ ಡಾಲರ್‌ ಆಗಿದ್ದು ಇದು 202ಕ್ಕೆ ಹೋಲಿಸಿದರೆ 4.7% ದಷ್ಟು ಏರಿಕೆಯಾಗಿದೆ.

ಒಟ್ಟಾರೆಯಾಗಿ ಜಾಗತಿಕ ಮಿಲಿಟರಿ ವೆಚ್ಚವು ಎಲ್ಲಕ್ಕಿಂತ ಗರಿಷ್ಟ ಮಟ್ಟವನ್ನು ತಲುಪಿದ್ದು 2,113 ಬಿಲಿಯನ್‌ ಡಾಲರ್ ಗಳಷ್ಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಾಗತಿಕ ಮಿಲಿಟರಿ ವೆಚ್ಚವು 0.7 % ಹೆಚ್ಚಾಗಿದೆ. ಜಾಗತಿಕವಾಗಿ ಅತಿ ಹೆಚ್ಚು ಮಿಲಿಟರಿವೆಚ್ಚ ಮಾಡಿದ ರಾಷ್ಟ್ರಗಳ ಸಾಲಿನಲ್ಲಿ ಕ್ರಮವಾಗಿ ಅಮೆರಿಕ, ಚೀನಾ, ಭಾರತ, ಯುನೈಟೆಡ್‌ ಕಿಂಗ‌ಡಮ್‌ ಮತ್ತು ರಷ್ಯಾ ಮೊದಲ ಐದು ಸ್ಥಾನಗಳನ್ನು ಹಂಚಿಕೊಂಡಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss