ಇಲ್ಲಿ ನಡೆಯುತ್ತದೆ ಕನ್ಯತ್ವ ಪರೀಕ್ಷೆ: ಪಾಸಾದವರಿಗೆ ಸಿಗುತ್ತೆ ಸರ್ಟಿಫಿಕೇಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿರುವ ನಜರೆತ್ ಬ್ಯಾಪ್ಟಿಸ್ಟ್ ಚರ್ಚ್‌ನಲ್ಲಿ ನಡೆಯುತ್ತಿರುವ ಯುವತಿಯರ ಕನ್ಯತ್ವ ಪರೀಕ್ಷೆ ಈಗ ಭಾರೀ ಪರ ವಿರೋಧ ಚರ್ಚೆಗೆ ಗ್ರಾಸವಾಗಿದೆ. ಸಮಾಜಿಕ ಜಾಲತಾಣಗಳಲ್ಲಿಯೂ ಇದು ಭಾರೀ ಚರ್ಚೆಗೆ ಆಹಾರವಾಗಿದೆ.
ಇಷ್ಟಕ್ಕೂ ಏನಿದು ವಿಷ್ಯಾ?
ದಕ್ಷಿಣ ಆಫ್ರಿಕಾದಲ್ಲಿ ಎರಡನೇ ಅತಿದೊಡ್ಡ ಚರ್ಚ್ ಆಗಿರುವ ನಜರೆತ್ ಬ್ಯಾಪ್ಟಿಸ್ಟ್ ಚರ್ಚ್‌ನಲ್ಲಿ ಯುವತಿಯರಿಗೆ ಕನ್ಯತ್ವ ಪರೀಕ್ಷೆ ನಡೆಸಲಾಗುತ್ತಿದ್ದು, ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ವಿತರಿಸಲಾಗುತ್ತಿದೆ. 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಯುವತಿಯರು ಈ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದಾರಲ್ಲದೆ, ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಖುಷಿಯಿಂದ ಫೋಟೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡು ನೆಟ್ಟಿಗರಿಗೆ ಶಾಕ್ ನೀಡಿದ್ದಾರೆ!
ಈ ಬಗ್ಗೆ ಪ್ರತಿಕ್ರಿಯಿಸಿರುವ ಚರ್ಚ್ ಆಡಳಿತ, ಇದನ್ನು ಪ್ರತಿ ವರ್ಷವೂ ನಡೆಸಲಾಗುತ್ತದೆ. ಮಹಿಳೆಯರಲ್ಲಿ ಪರಿಶುದ್ಧತೆಯನ್ನು ಉತ್ತೇಜಿಸುವ ಪ್ರಯತ್ನ ಇದು ಎಂದಿದೆ. ಆದರೆ ಇದನ್ನು ಟೀಕಿಸಿರುವ ನೆಟ್ಟಿಗರು, ಕನ್ಯತ್ವದ ಹೆಸರಿನ ಅತ್ಯಂತ ಕೆಟ್ಟ ಸಂಪ್ರದಾಯ ಎಂದಿದ್ದಾರೆ. ಮಹಿಳೆಯರಿಗೆ ಮಾತ್ರ ಪರೀಕ್ಷೆ ಏಕೆ, ಪುರುಷರು ಪರಿಶುದ್ಧರಾಗಿ ಇಲ್ಲದಿದ್ದರೂ ನಡೆಯುತ್ತದೆಯೇ ಎಂದು ಮತ್ತೊಂದಿಷ್ಟು ಮಂದಿ ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!