ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದು ಕಾಲಕ್ಕೆ ದೇಶದ ರಸ್ತೆಗಳಲ್ಲಿ ಮಹಾರಾಜನಂತೆ ಮೆರೆದಿದ್ದ ಮಾರುತಿ 800 ಕಾರಿಗೆ ಇಂದು 40ನೇ ಬರ್ತ್ ಡೇ ಸಂಭ್ರಮ!
ಹಿಂದೆ 1983ರ ಡಿಸೆಂಬರ್ 14 ರಂದು ಜನಿಸಿದ ಮಾರುತಿ 800ನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಹಸ್ತದಲ್ಲಿ ಚಾವಿ ಪಡೆದುಕೊಳ್ಳುವ ಮೂಲಕ ಹರ್ಪಲ್ ಸಿಂಗ್ ಅವರು ಮೊತ್ತ ಮೊದಲ ಮಾರುತಿ 800 ಮಾಲೀಕ ಎಂಬ ಕೀರ್ತಿಗೆ ಭಾಜನರಾಗಿದ್ದರು. ಮೊದಲ ಕಾರಿನ ಬೆಲೆ 47500 ರೂ. ಆಗಿತ್ತು.
ರಸ್ತೆಗಿಳಿಯುತ್ತಲೇ ಗ್ರಾಹಕರ ಮನಗೆದ್ದ ಈ ಕಾರು ಅಂದು 10 ಸಾವಿರ ರೂ. ನೀಡಿ ಬರೋಬ್ಬರಿ 1.2 ಲಕ್ಷ ಜನರು ಬುಕ್ ಮಾಡಿದ್ದರು ಎಂದರೆ ಇದರ ಜನಪ್ರಿಯತೆ ಹೇಗಿತ್ತು ನೀವೇ ಊಹಿಸಿಕೊಳ್ಳಿ!
ಪ್ರತಿ 800ನೇ ನಿಮಿಷಕ್ಕೆ ಹೊಸ ಕಾರನ್ನು ಹೊರತರುವುದಾಗಿ ಹೇಳುತ್ತಿದ್ದ ಮಾರುತಿ ಸಂಸ್ಥೆಯ ಕಾರ್ಖಾನೆಯನ್ನು ಅಂದಿನ ಭಾರತದ ಪ್ರಧಾನಿ ಇಂದಿರಾ ಗಾಂಧಿಯವರು ಗುರ್ಗಾಂವ್‌ನಲ್ಲಿ ಈ ದಿನ ಉದ್ಘಾಟಿಸಿದ್ದರು.
1980ರ ದಶಕದಲ್ಲಿ ದರ್ಬಾರ್ ನಡೆಸಿದ್ದ ಈ ಕಾರು 2014ರಲ್ಲಿ ಉತ್ಪಾದನೆ ಸ್ಥಗಿತಗೊಳಿಸಲಾಯಿತು. 2014ರ ಫೆಬ್ರವರಿ ತಿಂಗಳಿನಲ್ಲಿ ಕೊನೆಯ ಕಾರನ್ನು ಚಂಡಿಗಢದ ಗ್ರಾಹಕರೊಬ್ಬರಿಗೆ ಹಸ್ತಾಂತರಿಸುವ ಮೂಲಕ ಮಾರುತಿ 800 ಎಂಬ ಐಕಾನಿಕ್ ಕಾರು ಇತಿಹಾಸದ ಪುಟಗಳಿಗೆ ಶಾಶ್ವತವಾಗಿ ಸೇರಿಹೋಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ