ಬೀಚ್ ಉತ್ಸವಕ್ಕೆ ಸಜ್ಜಾಗಿದೆ ಕಾಸರಗೋಡು ಬೇಕಲ: ಬೀಚ್ ಪಾರ್ಕ್ ಆಗಿದೆ ಈಗ ಫಲಫಳ!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಸರಗೋಡು ಜಿಲ್ಲೆ ಈಗ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದು!
ಇಲ್ಲಿ ಮೇಳೈಸಲಿರುವ ಬೇಕಲ ಅಂತಾರಾಷ್ಟ್ರೀಯ ಬೀಚ್ ಉತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಇಲ್ಲಿನ ರೆಡ್ ಮೂನ್ ಬೀಚ್ ಪಾರ್ಕ್ ಪ್ರವಾಸಿಗರನ್ನು ಬೀಚ್ ಉತ್ಸವಕ್ಕೆ ಸ್ವಾಗತಿಸಲು ಸರ್ವ ಸಜ್ಜಾಗಿದೆ.
ಬೀಚ್ ಉತ್ಸವಕ್ಕೆ ಆಗಮಿಸುವ ಪ್ರವಾಸಿಗರಿಗೆ ಪ್ರವೇಶಿಸಲು ಇಲ್ಲಿ ಐದು ಕಡೆಯಲ್ಲಿ ದಾರಿಗಳಿವೆ. ಇಲ್ಲಿನ ಪ್ರತಿ ಪ್ರವೇಶ ದ್ವಾರದಲ್ಲಿ ಕೂಡಾ ಟಿಕೆಟ್ ಖರೀದಿಸಲು ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಅಮ್ಯೂಸ್ಮೆಂಟ್ ರೈಡ್, ಬಗೆಬಗೆಯ ಆಹಾರ ಮಳಿಗೆಗಳು ಪ್ರವಾಸಿಗರನ್ನು ಖುಷಿಪಡಿಸಲು ಸಜ್ಜಾಗುತ್ತಿವೆ.
ಹತ್ತು ದಿವಸಗಳ ಕಾಲ ನಡೆಯುವ ಬೀಚ್ ಫೆಸ್ಟ್‌ನ ಅಂಗವಾಗಿ ಆಹಾರ ಮಳಿಗೆಗಳು ಮತ್ತು ಇತರ ಉತ್ಪನ್ನಗಳ ಮಳಿಗೆಗಳು ಕಾರ್ಯಾಚರಿಸಲಿದೆ. ಸ್ಟಾಲ್ ಬೇಕಾದವರು ರೆಡ್ ಮೂನ್ ಬೀಚ್ ಕಚೇರಿಯನ್ನು ಸಂಪರ್ಕಿಸಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!