Sunday, September 25, 2022

Latest Posts

ಹರ್ ಘರ್ ತಿರಂಗಾ ಸೈಕಲ್ ಜಾಥಾಕ್ಕೆ ಡಿಸಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಚಾಲನೆ

ಹೊಸದಿಗಂತ ವರದಿ ವಿಜಯಪುರ:
ನಗರದಲ್ಲಿ ಹರ್ ಘರ್ ತಿರಂಗಾ ಸೈಕಲ್ ಜಾಥಾಗೆ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಶನಿವಾರ ಬೆಳಗ್ಗೆ ಚಾಲನೆ ನೀಡಿದರು.

ಇಲ್ಲಿನ ಮಹಾನಗರ ಪಾಲಿಕೆ ಆವರಣದಿಂದ ಸೈಕಲ್ ಜಾಥಾ ಆರಂಭಗೊಂಡು, ಜಲನಗರ, ಬಸವೇಶ್ವರ ವೃತ್ತ, ಗಾಂಧಿ ವೃತ್ತ ಸೇರಿದಂತೆ ನಗರಾದ್ಯಂತ ಸಂಚರಿಸಿ, ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಗೊಳಿಸಿ ಎಂದು ಕೋರಲಾಯಿತು. ಜಾಥಾಯುದ್ದಕ್ಕೂ ಭಾರತ ಮಾತೆಯ ಜೈಘೋಷ ಮೊಳಗಿತು.

ಈ ಸಂದರ್ಭ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂದೆ ಸೇರಿದಂತೆ ಹಲವು ಗಣ್ಯರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!