ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಟಿ20 ಮಾದರಿಗೆ ಪ್ರತ್ಯೇಕ ನಾಯಕನ ಅಗತ್ಯದ ಬಗ್ಗೆ ಹೇಳಿದ್ದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಸಲಹೆಯನ್ನು ಭಾರತ ತಂಡದ ಮಾಜಿ ತರಬೇತುದಾರ ರವಿಶಾಸ್ತ್ರಿ ಅನುಮೋದಿಸಿದ್ದಾರೆ.
ತಂಡದ ಬಲವರ್ಧನೆಗೆ ನಾಯಕನ ಬದಲು ಮಾಡಬಹುದು. ಹಾರ್ದಿಕ್ ಪಾಂಡ್ಯ ನಾಯಕನ ಸ್ಥಾನ ತುಂಬುವಲ್ಲಿ ಸಮರ್ಥ ಎಂದು ಹೇಳಿದ್ದಾರೆ.
ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಟಿ20ಗೆ ಪ್ರತ್ಯೇಕ ನಾಯಕನ ನೇಮಕದಿಂದ ಯಾವುದೇ ಹಾನಿಯಾಗುವುದಿಲ್ಲ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇದಕ್ಕೆ ಸೂಕ್ತ ಆಟಗಾರ. ನಾಯಕನ ಬದಲಿ ತಂಡವನ್ನು ಬಲಪಡಿಸಲಿದೆ. ಮೂರು ಪ್ರಕಾರದ ಕ್ರಿಕೆಟ್ ಅನ್ನು ಒಬ್ಬ ನಾಯಕ ನಿಭಾಯಿಸುವುದು ಕಷ್ಟ. ರೋಹಿತ್ ಶರ್ಮಾ ಟೆಸ್ಟ್ ಮತ್ತು ಏಕದಿನದ ನೇತೃತ್ವ ವಹಿಸಿಕೊಂಡರೆ, ಟಿ20 ಮಾದರಿಗೆ ಹೊಸ ನಾಯಕನ ನೇಮಕ ಮಾಡುವುದು ಉತ್ತಮ ಎಂದು ಹೇಳಿದ್ದಾರೆ.