ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರೋಗ್ಯ, ಆಹಾರ, ಹಣಕಾಸು, ವ್ಯಾಪಾರ ಹಾಗೂ ಸಮುದಾಯ ಸೇವೆಗೆ ನೀಡಿದ ಮಹತ್ವದ ಕೊಡುಗೆಗಳಿಗಾಗಿ ಬಂಟ್ವಾಳ ತಾಲೂಕಿದ ಮುದ್ರಾಜೆ ಗ್ರಾಮದ ಹಾರ್ದಿಕ್ ಹರ್ಬಲ್ಸ್‌ಗೆ ಸಮತ್ವ ಪ್ರಶಸ್ತಿ ಗೌರವ ಸಂದಿದೆ.
ಉಡುಪಿಯ ಎಂಜಿಎಂ ಕಾಲೇಜು ಆವರಣದಲ್ಲಿ ನಡೆದ ಸಮತ್ವ ಆಹಾರ, ಆರೋಗ್ಯ ಮತ್ತು ಹಣಕಾಸು ಎಕ್ಸ್‌ಪೋದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಹಾರ್ದಿಕ್ ಹರ್ಬಲ್ಸ್ ಕಂಪನಿಯ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಶ್ರೇಷ್ಠತೆಗೆ ಬದ್ಧತೆಯು ನಮ್ಮ ಗಮನಕ್ಕೆ ಬಂದಿದೆ. ಈ ಪ್ರಶಸ್ತಿಯು ನಿಮ್ಮ ಗಮನಾರ್ಹ ಪ್ರಯತ್ನಗಳು ಮತ್ತು ನೀವು ಮಾಡುತ್ತಿರುವ ಸಕಾರಾತ್ಮಕ ಕೆಲಸಗಳಿಗೆ ನಾವು ನೀಡಿರುವ ಮನ್ನಣೆಯಾಗಿದೆ ಎಂದು ಸಮತ್ವ ತಂಡ ಹೇಳಿದೆ.