ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾನ್ ಇಂಡಿಯಾ ಸಿನಿಮಾ ರಾಮಾಯಣ ಶೂಟಿಂಗ್ ನಡೆಯುತ್ತಿದೆ. ಈ ಸಿನಿಮಾದಲ್ಲಿ ರಾಮನ ಪಾತ್ರಕ್ಕಾಗಿ ರಣ್‌ಬೀರ್ ಕಪೂರ್, ಸೀತೆಯ ಪಾತ್ರಕ್ಕಾಗಿ ಸಾಯಿ ಪಲ್ಲವಿ ಹಾಗೂ ರಾವಣನ ಪಾತ್ರಕ್ಕೆ ಯಶ್ ಆಯ್ಕೆಯಾಗಿದ್ದಾರೆ.
ಈ ಹಿಂದೆ ಸಿನಿಮಾ ಆರಂಭದಲ್ಲಿ ಮೊದಲು ಯಶ್‌ಗೆ ರಾಮನ ಪಾತ್ರ ಮಾಡೋದಕ್ಕೆ ಆಫರ್ ಸಿಕ್ಕಿದೆ. ಆದರೆ ಯಶ್ ಅದನ್ನು ನಿರಾಕರಿಸಿದ್ದಾರೆ. ರಾಮ, ಲಕ್ಷ್ಮಣ, ಹನುಮಂತ ಯಾವುದೇ ಪಾತ್ರ ಕೊಟ್ಟರೂ ನಾನು ಮಾಡೋದಿಲ್ಲ. ರಾವಣನ ಪಾತ್ರ ಕೊಟ್ಟರೆ ಮಾತ್ರ ಆಕ್ಟ್ ಮಾಡುತ್ತೇನೆ ಎಂದು ಯಶ್ ಕಂಡೀಷನ್ ಹಾಕಿದ್ರಂತೆ!
ರಾವಣ ಪಾತ್ರ ಬೇಕೆಂದು ನಾನೇ ಕೇಳಿದೆ. ಚಿತ್ರದಲ್ಲಿ ರಾಮ, ಲಕ್ಷ್ಮಣ, ಆಂಜನೇಯ ಯಾವುದೇ ಪಾತ್ರ ಕೊಟ್ಟರೂ ನಾನು ಮಾಡಲ್ಲಎಂದಿದ್ದೆ. ನಟನಾಗಿ ನನಗೆ ರಾವಣನ ಪಾತ್ರ ತುಂಬಾ ರೋಚಕ ಅನ್ನಿಸುತ್ತದೆ. ರಾವಣ ಪಾತ್ರದಲ್ಲಿ ನಟಿಸೋದು ತುಂಬಾ ಕಷ್ಟಕರ. ಪಾತ್ರದ ಮುಖಭಾವ ಸೇರದಂತೆ ಸೂಕ್ಷ್ಮ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಹಾಗಾಗಿ ನಟನಾಗಿ ಈ ಚಾಲೆಂಜ್ ಸ್ವೀಕರಿಸಿದ್ದೇನೆ. ಈ ಪಾತ್ರವನ್ನು ವಿಭಿನ್ನ ರೀತಿಯಲ್ಲಿ ಪ್ರಸ್ತುತಪಡಿಸಲು ಸಾಕಷ್ಟು ಸ್ಕೋಪ್ ಇದೆ ಎಂದು ಯಶ್ ಹೇಳಿದ್ದಾರೆ.