Friday, March 24, 2023

Latest Posts

PHOTO GALLERY | ಹಾರ್ದಿಕ್ ಪಾಂಡ್ಯ-ನತಾಶಾ ಮದುವೆಗೆ ಮಗನೇ ಸಾಕ್ಷಿ, ಕ್ಯೂಟೆಸ್ಟ್ ಫೋಟೊಸ್ ಇಲ್ಲಿವೆ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಲಾಕ್‌ಡೌನ್‌ನಲ್ಲಿ ರಿಜಿಸ್ಟರ್ ಮದುವೆಯಾದವರು. ಭರ್ಜರಿ ನಿಶ್ಚಿತಾರ್ಥ ಮಾಡಿಕೊಂಡ ನಂತರ ಕೋವಿಡ್ ಬಂದಿದ್ದು, ಅದ್ಧೂರಿ ಮದುವೆಯಾಗೋಕೆ ಆಗಿರಲಿಲ್ಲ.
ಈ ದಂಪತಿಗೆ ಮೂರು ವರ್ಷದ ಮಗನಿದ್ದು, ಮಗನ ಎದುರು ಮದುವೆಯಾಗೋಕೆ ದಂಪತಿ ನಿರ್ಧಾರ ಮಾಡಿದ್ರು.
ಅದರಲ್ಲೂ ಪ್ರೇಮಿಗಳ ದಿನದಂದೇ ಅದ್ಧೂರಿಯಾಗಿ ಮದುವೆಯಾಗೋಕೆ ನಿರ್ಧಾರ ಮಾಡಿದ್ದು, ಸಿನಿ ಗಣ್ಯರು ಹಾಗೂ ಕ್ರಿಕೆಟಿಗರಿಗೆ ಆಹ್ವಾನ ನೀಡಲಾಗಿತ್ತು. ಕ್ರಿಶ್ಚಿಯನ್ ಪದ್ಧತಿಯಲ್ಲಿ ಮದುವೆಯಾಗಿದ್ದು, ಫೋಟೊಸ್ ಹೇಗಿದೆ ನೋಡಿ..

ಭಾರತದ ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ನಟಿ ನತಾಶಾ ಸ್ಟಾಂಕೋವಿಚ್ ಅವರ ಮದುವೆ ಅದ್ದೂರಿಯಾಗಿ ನೆರವೇರಿದೆ. ಈ ಫೋಟೋಗಳನ್ನು ಈ ಜೋಡಿ ಹಂಚಿಕೊಂಡಿದೆ.ಹಾರ್ದಿಕ್ ಹಾಗೂ ನತಾಶಾ ಫೆಬ್ರವರಿ 14ರಂದು ಮದುವೆ ಆಗಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.ಮದುವೆ ಆದ ಬಳಿಕ ಮಗು ಮಾಡಿಕೊಳ್ಳೋದು ಕಾಮನ್. ಆದರೆ, ಹಾರ್ದಿಕ್ ಪಾಂಡ್ಯ ಮಗು ಪಡೆದ ನಂತರ ಮದುವೆ ಆಗಿದ್ದಾರೆ. ಈ ವಿಚಾರದಲ್ಲಿ ಅನೇಕರನ್ನು ಅವರನ್ನು ಟ್ರೋಲ್ ಕೂಡ ಮಾಡಿದ್ದಾರೆ.

ನತಾಶಾ ಅವರು ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ‘ಬಿಗ್ ಬಾಸ್ 8’ರ ಸ್ಪರ್ಧಿ ಆಗಿದ್ದರು. ಕೆಲವು ಹಿಂದಿ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

ಈ ಮದುವೆ ಎರಡು ರೀತಿಯಲ್ಲಿ ನಡೆದಿದೆ ಎನ್ನಲಾಗಿದೆ. ಮೊದಲು ಈ ಇಬ್ಬರು ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದು ಬಳಿಕ, ಪಾಶ್ಚಿಮಾತ್ಯ ಸಂಸ್ಕೃತಿ ಪ್ರಕಾರ ಮದುವೆ ಆಗಿದ್ದಾರೆ. ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಎಂಗೇಜ್​ಮೆಂಟ್ ಮಾಡಿಕೊಂಡರು. ಆದರೆ, ಮದುವೆ ಆಗಿರಲಿಲ್ಲ. ನಂತರ ನತಾಶಾ ಗಂಡುಮಗುವಿಗೆ ಜನ್ಮನೀಡಿದರು. ಈಗ ಇವರು ರಾಜಸ್ಥಾನದ ಜೈಪುರದಲ್ಲಿ ಮದುವೆ ಆಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!