ಸಾಮಾಗ್ರಿಗಳು
ರಾಗಿಹಿಟ್ಟು
ಅನ್ನ
ಉಪ್ಪು
ನೀರು
ಮಾಡುವ ವಿಧಾನ
ಮೊದಲು ಅನ್ನಕ್ಕೆ ನೀರು ಹಾಕಿ ಬಿಸಿ ಮಾಡಲು ಇಡಿ, ನಿನ್ನೆಯ ಅನ್ನ ಅಥವಾ ಅನ್ನ ಹಾಕುವುದಿಲ್ಲ ಎಂದರೆ ನೀರನ್ನು ಮಾತ್ರ ಬಿಸಿ ಇಡಿ.
ನಂತರ ಇದಕ್ಕೆ ಉಪ್ಪು ಹಾಕಿ
ನಂತರ ರಾಗಿಹಿಟ್ಟು ಹಾಕಿ ಮಿಕ್ಸ್ ಮಾಡಿ
ಸ್ವಲ್ಪ ತಣ್ಣಗಾದ ಮೇಲೆ ಕೈಯಿಂದ ನಾದಿಕೊಳ್ಳಿ
ನಂತರ ಇದಕ್ಕೆ ಹಿಟ್ಟು ಹಾಕಿಕೊಳ್ಳುತ್ತಾ ಚಪಾತಿ ರೀತಿ ಲಟ್ಟಿಸಿ
ನಂತರ ಕಾದ ಕಬ್ಬಿಣದ ಹಂಚಿಗೆ ಹಾಕಿ, ನೀರು ಹಚ್ಚಿ ತಿರುಗಿಸಿ ಬಿಸಿ ಬಿಸಿ ರೊಟ್ಟಿ ತಿನ್ನಿ