ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಹಾರ್ದಿಕ್‌ ಪಟೇಲ್‌

ಹೊಸದಿಗಂತ ಡಜಿಟಲ್‌ ಡೆಸ್ಕ್:‌
ಗುಜರಾತ್‌ ಪಾಟೀದಾರ್‌ ಸಮುದಾಯದ ನಾಯಕ ಹಾಗೂ ಮಾಜಿ ಕಾಂಗ್ರೆಸ್‌ ಮುಖಂಡ ಹಾರ್ದಿಕ್‌ ಪಟೇಲ್‌ ಬಿಜೆಪಿ ಸೇರುವುದು ಖಚಿತವಾಗಿದೆ. ಈ ಕುರಿತು ಗುಜರಾತ್‌ ಬಿಜೆಪಿ ರಾಜ್ಯ ವಕ್ತಾರರು ಸ್ಪಷ್ಟನೆ ನೀಡಿದ್ದು ಜೂ.2ರಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.

ಪಾಟೀದಾರರಿಗೆ ಮೀಸಲಾತಿ ನೀಡಬೇಕೆಂಬ ಹೋರಾಟದ ಮುಂಚೂಣಿ ನಾಯಕ ಹಾರ್ದಿಕ್‌ ಪಟೇಲ್‌ ಈ ಕುರಿತು ತಮ್ಮ ನಿರ್ಧಾರವನ್ನೂ ಕೂಡ ಸ್ಪಷ್ಟ ಪಡಸಿದ್ದಾರೆ. ಈ ಹಿಂದೆ ಕಾಂಗ್ರೆಸ್‌ ಪಕ್ಷದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಅವರಿಗೆ ಕಾಂಗ್ರೆಸ್‌ ಪಕ್ಷದಲ್ಲಿ ಉತ್ತಮ ಹುದ್ದೆಯನ್ನೂ ಕೊಡಲಾಗಿತ್ತು. ಆದರೆ ಪ್ರಸ್ತುತ ಕೆಲವು ದಿನಗಳ ಹಿಂದೆ ಅವರು ಕಾಂಗ್ರೆಸ್‌ ಗೆ ರಾಜೀನಾಮೆ ನೀಡಿದ್ದರು “ಕಾಂಗ್ರೆಸ್‌ ನಲ್ಲಿ ಸಮರ್ಥ ನಾಯಕತ್ವದ ಕೊರತೆಯಿದೆ ಎಂದಿದ್ದರು ಅಲ್ಲದೇ ಕಾಂಗ್ರೆಸ್‌ ನವರು ಹಿಂದುಗಳ ನಂಬಿಕೆಯೆ ಬಗ್ಗೆ ಅಪಹಾಸ್ಯ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದರು.

ಪ್ರಸ್ತುತ ಜೂ. 2ರಂದು ಗುಜರಾತ್‌ ಬಿಜೆಪಿ ಅಧ್ಯಕ್ಷ ಸಿ.ಆರ್‌ ಪಾಟಿಲ್‌ ಸಮ್ಮುಖದಲ್ಲಿಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ,

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!