ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಏರಿಕೆ ಕಂಡ ಹರ್ಮನ್‌ ಪ್ರೀತ್‌, ಸ್ಮೃತಿ ಮಂದಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಇತ್ತೀಚೆಗೆ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಉಪನಾಯಕಿ ಸ್ಮೃತಿ ಮಂದಾನ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಏರಿಕೆ ಕಂಡಿದ್ದಾರೆ.
ಹರ್ಮನ್‌ ಪ್ರೀತ್‌ ಒಂದು ಸ್ಥಾನ ಮೇಲೇರಿ 13ನೇ ಸ್ಥಾನಕ್ಕೆ ತಲುಪಿದರೆ, ಸ್ಮೃತಿ ಮಂದಾನ ಒಂಬತ್ತನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಇತ್ತೀಚೆಗೆ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಸರಣಿಯನ್ನು ಭಾರತವು 3-0 ಯಲ್ಲಿ ಕ್ಲೀನ್ ಸ್ವೀಪ್‌ ,ಆಡಿತ್ತು. ಈ ಸರಣಿಯಲ್ಲಿ 59.50 ಸರಾಸರಿಯಲ್ಲಿ 119 ರನ್ ಗಳಿಸುವುದರ ಜೊತೆಗೆ ಮೂರು ವಿಕೆಟ್‌ಗಳನ್ನು ಕಬಳಿಸಿ ಆಲ್‌ರೌಂಡ್ ಪ್ರದರ್ಶನ ತೋರಿದ್ದ ಹರ್ಮನ್‌ ಪ್ರೀತ್‌ ಸರಣಿ ಶ್ರೇಷ್ಠ ಆಟಗಾರ್ತಿ ಪುರಸ್ಕಾರ ಪಡೆದಿದ್ದರು.
ಮಂದಾನ ಸಹ ಉತ್ತಮ ಪ್ರದರ್ಶನ ತೋರಿ,  ಮೂರು ಪಂದ್ಯಗಳಿಂದ 52 ಸರಾಸರಿಯಲ್ಲಿ 104 ರನ್ ಕಲೆಹಾಕಿದ್ದರು. ಇತರ ಭಾರತೀಯ ಬ್ಯಾಟರ್‌ ಗಳಾದ ಶಫಾಲಿ ವರ್ಮಾ 33 ನೇ ಸ್ಥಾನಕ್ಕೆ (ಮೂರು ಸ್ಥಾನ ಏರಿಕೆ), ಯಾಸ್ತಿಕಾ ಭಾಟಿಯಾ 45ನೇ ಸ್ಥಾನ (ಒಂದು ಸ್ಥಾನ ಮೇಲೇರಿಕೆ).ಮತ್ತು ಬೌಲಿಂಗ್-ಆಲ್ ರೌಂಡರ್ ಪೂಜಾ ವಸ್ತ್ರಾಕರ್ 53ನೇ ಸ್ಥಾನಕ್ಕೆ (ಎಂಟು ಸ್ಥಾನ ಏರಿಕೆ) ತಲುಪಿದ್ದಾರೆ.
ಬೌಲರ್‌ಗಳ ಪೈಕಿ ರಾಜೇಶ್ವರಿ ಗಾಯಕ್‌ವಾಡ್ ಮೂರು ಸ್ಥಾನ ಮೇಲೇರಿ ಒಂಬತ್ತನೇ ಸ್ಥಾನದಲ್ಲಿದ್ದರೆ, ಮೇಘನಾ ಸಿಂಗ್ ನಾಲ್ಕು ಸ್ಥಾನ ಮೇಲೇರಿ 43ನೇ ಸ್ಥಾನಕ್ಕೆ ಜಿಗಿದ್ದಿದ್ದಾರೆ. ಪೂಜಾ ವಸ್ತ್ರಾಕರ್ ಎರಡು ಸ್ಥಾನ ಮೇಲೇರಿ ಜಂಟಿ 48ನೇ ಸ್ಥಾನಕ್ಕೆ ತಲುಪಿದ್ದಾರೆ. ಅನುಭವಿ ವೇಗಿ ಜೂಲನ್ ಗೋಸ್ವಾಮಿ ಬೌಲರ್‌ಗಳ ಪಟ್ಟಿಯಲ್ಲಿ ಆರನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
ಬ್ಯಾಟಿಂಗ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾದ ಅಲಿಸ್ಸಾ ಹೀಲಿ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಇಂಗ್ಲೆಂಡ್‌ನ ನಟಾಲಿ ಸ್ಕೈವರ್ ನಂತರದ ಸ್ಥಾನದಲ್ಲಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಇಂಗ್ಲೆಂಡ್‌ನ ಸೋಫಿಲ್ ಎಕ್ಲೆಸ್ಟೋನ್ ಮತ್ತು ದಕ್ಷಿಣ ಆಫ್ರಿಕಾದ ಶಬ್ನಿಮ್ ಇಸ್ಮಾಯಿಲ್ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!