IPL 2023 Auction | ಹ್ಯಾರಿ ಬ್ರೂಕ್ಸ್‌ ಗೆ ಬಂಪರ್‌ ಪ್ರೈಸ್! 13.25 ಕೋಟಿ ಪಡೆದ ಇಂಗ್ಲೆಂಡ್​ ಸ್ಪೋಟಕ ಆಟಗಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕೊಚ್ಚಿಯಲ್ಲಿ ಸಾಗುತ್ತಿರುವ IPL 2023 ಹರಾಜು ಪ್ರಕ್ರಿಯೆಯಲ್ಲಿ ಇಂಗ್ಲೆಂಡ್‌ ಯುವ ಆಟಗಾರ ಹ್ಯಾರಿ ಬ್ರೂಕ್ಸ್‌ ಗೆ ಬಂಪರ್‌ ಪ್ರೈಜ್‌ ಸಿಕ್ಕಿದೆ. 1.5 ಕೋಟಿ ರೂ. ಮೂಲ ಬೆಲೆ ಹೊಂದಿದ್ದ ಬ್ರೂಕ್ಸ್‌ಗೆ ಸನ್ ರೈಸರ್ಸ್ ಹೈದರಾಬಾದ್ ಮಿನಿ ಹರಾಜಿನಲ್ಲಿ 13.25 ಕೋಟಿ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.
ಸ್ಫೋಟಕ ಆಟಗಾರ ಬ್ರೂಕ್ ಇತ್ತೀಚೆಗೆ ಪಾಕಿಸ್ತಾನ್ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಅದ್ಭುತ ಆಟವಾಡಿದ್ದರು. 23 ರ ಹರೆಯದ ಬಲಗೈ ಬ್ಯಾಟರ್ ಇಂಗ್ಲೆಂಡ್ ಪರ ಕೇವಲ 3 ಟೆಸ್ಟ್​ ಪಂದ್ಯಗಳಲ್ಲಿ ಮೂರು ಶತಕ ಸೇರಿದಂತೆ 480 ರನ್​ ಕಲೆಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!