Tuesday, August 9, 2022

Latest Posts

ಹರ್ಷ ಕೊಲೆ ಪ್ರಕರಣ: ಆರೋಪಿಗಳನ್ನು ಕೂಡಲೇ ಬಂಧಿಸಿ

ಹೊಸದಿಗಂತ ವರದಿ, ಚಿತ್ರದುರ್ಗ

ಶಿವಮೊಗ್ಗ ಜಿಲ್ಲೆಯ ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಕೊಲೆ ಪ್ರಕರಣದ ಅಪರಾಧಿಕಗಳನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ – ಬಜರಂಗದಳದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು. ೩೦ ನಿಮಿಷಗಳ ಚಿತ್ರದುರ್ಗ ನಗರದ ಗಾಂಧಿ ವೃತ್ತದ ಬಳಿ ರಸ್ತೆ ತಡೆ ಮಾಡಲಾಯಿತು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಶಿವಮೊಗ್ಗ ಜಿಲ್ಲೆಯ ನಿವಾಸಿ ಹರ್ಷ ಎಂಬ ೨೩ ವರ್ಷ ವಯಸ್ಸಿನ ಬಜರಂಗದಳ ಕಾರ್ಯಕರ್ತರನ್ನು ಮುಸ್ಲಿಂ ಜಿಹಾದಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಇದರ ಹಿಂದೆ ಎಸ್.ಡಿ.ಪಿ.ಐ. ಮತ್ತು ಪಿ.ಎಫ್.ಐ. ಕಾರ್ಯಕರ್ತರ ಕೈವಾಡವಿದೆ. ಈ ರೀತಿಯ ಅಮಾನವೀಯ ಘಟನೆಯ ಮೂಲಕ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಠಿಸಿರುವ ಪಿ.ಎಫ್.ಐ. ಮತ್ತು ಎಸ್.ಡಿ.ಪಿ.ಐ. ಎಲ್ಲಾ ಗೂಂಡಾಗಳನ್ನು ಬಂಧಿಸಿ ಕಾನೂನು ಕ್ರಮಕೈಗೊಂಡು ಮೃತ ಹರ್ಷನಿಗೆ ನ್ಯಾಯದೊರಕಿಸಿ ಕೊಡಬೇಕೆಂದು ಒತ್ತಾಯಿಸಿದರು.
ಎಸ್.ಡಿ.ಪಿ.ಐ. ಮತ್ತು ಪಿ.ಎಫ್.ಐ. ಸಂಘಟನೆಗಳ ಕಾರ್ಯಕರ್ತರು ರಾಜ್ಯದಲ್ಲಿ ಒಂದಲ್ಲಾ ಒಂದು ಕಡೆ ಸಮಾಜ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಲೇ ಬಂದಿದ್ದಾರೆ. ಹಿಂದೂ ಸಮುದಾಯದ ಜನರಿಗೆ, ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಗೆ ತೊಂದರೆ ನೀಡುತ್ತಲೇ ಇವೆ. ರಾಜ್ಯ ಹಾಗೂ ದೇಶದಲ್ಲಿ ಶಾಂತಿ ಕದಡುವುದು, ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುವುದು ಇವರ ಉದ್ದೇಶ, ಹಾಗಾಗಿ ಎಲ್ಲಾ ಅಪರಾಧಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಬೇಕು ಈ ಮೂಲಕ ಮೃತ ಹರ್ಷಆತ್ಮಕ್ಕೆ ಶಾಂತಿ ದೊರಕಿಸಿ ಕೊಡಬೇಕೆಂದು ಮನವಿ ಮಾಡಿದರು.
ಹಿಂದೂ ರಾಷ್ಟ್ರವಾದ ಭಾರತ ದೇಶವನ್ನು ಮುಸ್ಲಿಂ ರಾಷ್ಟ್ರ ಮಾಡುವ ಹುನ್ನಾರ ಮೊದಲಿನಿಂದಲೂ ಮುಸ್ಲಿಂ ಸಂಘಟನೆಗಳಿಂದ ನಡೆಯುತ್ತಿದೆ. ಅಲ್ಲದೇ ಇತಿಹಾಸದ ಪುಟಗಳನ್ನು ಗಮಿಸಿದಾಗ ಮುಸ್ಲಿಂ ದಾಳಿಕೋರರು ನಮ್ಮ ಸಂಸ್ಕೃತಿಯ ಮೇಲೆ ದಬ್ಬಾಳಿಕೆ ನಡೆಸಿರುವುದು ತಿಳಿದುಬರುತ್ತದೆ. ಹಿಂದೂ ಸಂಸ್ಕೃತಿಯ ಮೇಲೆ ಎಷ್ಟೇ ದಾಳಿಕೋರರು ದಾಳಿ ನಡೆಸಿದರೂ ಅದನ್ನು ಹಾಳು ಮಾಡಲು ಸಾಧ್ಯವಾಗಿಲ್ಲ. ಅದರಂತೆ ಭಾರತವನ್ನು ಎಂದೂ ಮುಸ್ಲಿಂ ರಾಷ್ಟ್ರ ಮಾಡಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ವಿಭಾಗ ಸಂಚಾಲಕ ಪ್ರಭಂಜನ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಪಿ.ರುದ್ರೇಶ್, ಜಿಲ್ಲಾ ಸಂಚಾಲಕ್ ಸಂದೀಪ್, ಸಹ ಸಂಚಾಲಕ ಕೃಷ್ಣ, ನಗರಾಧ್ಯಕ್ಷ ಶ್ರೀನಿವಾಸ್, ನಗರ ಸಂಚಾಲಕ ರಂಗಸ್ವಾಮಿ, ಮುಖಂಡರಾದ ವಿಠಲ್, ಶ್ರೀನಿವಾಸ್ ಡೈರಿ, ಬಿ.ಜೆ.ಪಿ. ಮುಖಂಡರಾದ ತಿಪ್ಪೇಸ್ವಾಮಿ, ಜಿ.ಎಂ.ಸುರೇಶ್, ಶಶಿ, ಕಾರ್ಯಕರ್ತರಾದ ಮರಿಸ್ವಾಮಿ, ರೇಣು, ತೇಜು, ಪ್ರಮೋದ್, ಅಖಿಲೇಶ್, ಹಾಗೂ ಮಹಿಳಾ ಕಾರ್ಯಕರ್ತರಾದ ಶ್ವೇತಾ, ಸುನಿತಾ ಮತ್ತಿತರರು ಭಾಗಿಯಾಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss