85,000 ಅಕ್ರಮ ಔಷಧಗಳನ್ನು ಸೀಜ್‌ ಮಾಡಿದ ಹರಿಯಾಣ ಪೊಲೀಸರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

85,000ಕ್ಕೂ ಹೆಚ್ಚು ನಿಷೇಧಿತ ಔಷಧಗಳನ್ನು ಹರಿಯಾಣ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅವುಗಳಲ್ಲಿ 10,000 ಕ್ಯಾಪ್ಸುಲ್‌ಗಳು, 75,000 ಮಾತ್ರೆಗಳು, 300 ಬಾಟಲ್ ಸಿರಪ್ ಮತ್ತು 100 ಇಂಜೆಕ್ಷನ್‌ಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಯಮುನಾನಗರ ಜಿಲ್ಲೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದು, ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.

ನಿಷೇಧಿತ ಮಾದಕ ದ್ರವ್ಯಗಳನ್ನು ಉತ್ತರ ಪ್ರದೇಶದಿಂದ ಹರಿಯಾಣಕ್ಕೆ ತರಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಕಾಳನೂರ್ ಗಡಿಯಲ್ಲಿ ವ್ಯಕ್ತಿಯೊಬ್ಬರು ಕಾರಿನಲ್ಲಿ ಹೆಚ್ಚಿನ ಪ್ರಮಾಣದ ಮಾದಕ ದ್ರವ್ಯಗಳನ್ನು ಸಾಗಿಸುತ್ತಿದ್ದಾರೆ ಎಂಬ ಮಾಹಿತಿಯ ಆಧಾರದ ಮೇಲೆ ತಪಾಸಣೆ ನಡೆಸಿದಾಗ ಪತ್ತೆಯಾಗಿವೆ.

20 ಬಾಕ್ಸ್ ಸ್ಪಾಸ್ಮೊಪ್ರೊಕ್ಸಿವಾನ್ ಕ್ಯಾಪ್ಸೂಲ್, 10 ಬಾಕ್ಸ್ ಲೊಮೊಟಿಲ್ ಮಾತ್ರೆ, 25 ಬಾಕ್ಸ್ ಪೆವೊನ್ ಸ್ಪಾಸ್ ಪ್ಲಸ್ ಕ್ಯಾಪ್ಸೂಲ್, 25 ಬಾಕ್ಸ್ ಅಲ್ಪ್ರಜೋಲಂ ಮಾತ್ರೆ, 2 ಬಾಕ್ಸ್ ಕ್ಲೋರ್‌ಫೆನಿರಮೈನ್ ಸಿರಪ್, 5 ಬಾಕ್ಸ್ ಹೈಡ್ರೋಕ್ಲೋರೈಡ್ ಕ್ಯಾಪ್ಸೂಲ್ ಮತ್ತು 2 ಬಾಕ್ಸ್ ಟ್ರಾಮಾಡಾಲ್ ವಶಪಡಿಸಿಕೊಳ್ಳಲಾಗಿದೆ.

ಆರೋಪಿಯ ಹೆಸರು ಅಮಿತ್ ಕುಮಾರ್. ಈತ ಅಂಬಾಲಾ ಜಿಲ್ಲೆಯ ಬರಾರ ಮೂಲದವನು ಎಂದು ಹೇಳಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ನಿಷೇಧಿತ ಔಷಧಗಳನ್ನು ಎಲ್ಲಿ ತೆಗೆದುಕೊಳ್ಳುತ್ತಿದ್ದಾರೆ? ಅವರು ಎಲ್ಲಿಂದ ಬಂದರು? ಆ ವಿಷಯಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!