ಬೊಮ್ಮಾಯಿ ಅಂಕಲ್, ಸ್ಯಾಂಕಿ ಮೇಲ್ಸೇತುವೆ ಬೇಡ: ಸಿಎಂ ಕಚೇರಿಗೆ ಬಂತು 2 ಸಾವಿರ ಮಕ್ಕಳ ಪತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಕಿ ಮೇಲ್ಸೇತುವೆಯನ್ನು ಕೈಬಿಡಿ ಎಂದು ಎರಡು ಸಾವಿರ ವಿದ್ಯಾರ್ಥಿಗಳು ಸಿಎಂ ಬೊಮ್ಮಾಯಿ ಅವರ ಕಚೇರಿಗೆ ಕೈ ಬರಹದ ಪೋಸ್ಟ್‌ಕಾರ್ಡ್‌ಗಳನ್ನು ಪೋಸ್ಟ್ ಮಾಡಿದ್ದಾರೆ.

ಬೆಂಗಳೂರಿನ ಸ್ಯಾಂಕಿ ರಸ್ತೆ ವಿಸ್ತರಣೆ ಮತ್ತು ಮೇಲ್ಸೇತುವೆ ಯೋಜನೆಯಿಂದ ಪರಿಸರಕ್ಕೆ ಹಾನಿ ಎಂದು ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆ ಸ್ಥಳೀಯ ವಿದ್ಯಾರ್ಥಿಗಳು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದು, ಕೆರೆ ಉಳಿಸುವಂತೆ ಕೋರಿದ್ದಾರೆ.

ಆತ್ಮೀಯ ಬೊಮ್ಮಾಯಿ ಅಂಕಲ್, ದಯವಿಟ್ಟು ನಮ್ಮ ಪರಿಸರವನ್ನು ರಕ್ಷಿಸಿ, ಸ್ಯಾಂಕಿ ಮೇಲ್ಸೇತುವೆ ಬೇಡ. ಸುರಕ್ಷಿತ ವಾತಾವರಣದಲ್ಲಿ ಕಲಿಯಲು ಮತ್ತು ಒಟ್ಟಿಗೆ ಆಟ ಆಡಲು ಇಷ್ಟಪಡುತ್ತೇವೆ ಎಂದು ಬರೆದಿದ್ದಾರೆ.

ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಸ್ಯಾಂಕಿ ರಸ್ತೆ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ. ಜತೆಗೆ ಭಾಷ್ಯಂ ಸರ್ಕಲ್‌ನಿಂದ ಮಲ್ಲೇಶ್ವರಂ 18 ನೇ ಕ್ರಾಸ್‌ವರೆಗೆ ಮೇಲ್ಸೇತುವೆ ನಿರ್ಮಾಣ ಮಾಡಲು ಸರ್ಕಾರ ಟೆಂಡರ್ ಕರೆಯಲಾಗಿದೆ. ಇದಕ್ಕಾಗಿ 40 ಮರಗಳನ್ನು ಕಡಿಯಲಾಗುವುದು. ಈ ಕಾರಣಕ್ಕಾಗಿ ಮಕ್ಕಳು ಪತ್ರ ಬರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!